ADVERTISEMENT

ಎಚ್‌1–ಬಿ ವೀಸಾ ನಿಯಮ ತಿದ್ದುಪಡಿ ಪ್ರಸ್ತಾಪಿಸಿದ ಮೋದಿ

ಪಿಟಿಐ
Published 14 ನವೆಂಬರ್ 2018, 19:45 IST
Last Updated 14 ನವೆಂಬರ್ 2018, 19:45 IST

ನವದೆಹಲಿ: ಎಚ್‌1– ಬಿ ವೀಸಾ ನಿಯಮ ಬದಲಿಸುವ ಮುಂಚೆ, ‘ಭಾರತೀಯ ಉದ್ಯೋಗಿಗಳಿಂದ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಕೊಡುಗೆ ಸಿಗುತ್ತಿದೆ’ ಎನ್ನುವ ಅಂಶವನ್ನು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆ ಮಾಡಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಬುಧವಾರಸಿಂಗಪುರದಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿ, ಎಚ್‌1–ಬಿ ವೀಸಾ ವಿಷಯ ಪ್ರಸ್ತಾಪಿಸಿದ್ದು, ‘ಭಾರತೀಯ ಉದ್ಯೋಗಿಗಳು ತಮ್ಮಪ್ರತಿಭೆ, ಸಾಮರ್ಥ್ಯ, ನಾವೀನ್ಯತೆ, ಶ್ರೇಷ್ಠತೆಯ ಜತೆಗೆತಮ್ಮಲ್ಲಿ ಮೈಗೂಡಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಆ ರಾಷ್ಟ್ರಕ್ಕೆ ಕೊಡುಗೆ ನೀಡುತ್ತಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT