ನವದೆಹಲಿ: ದೇಶದ ದಿಗ್ಗಜ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಆರ್.ಕೆ.ಲಕ್ಷ್ಮಣ್ ಅವರ ನೂರನೇ ಜನ್ಮದಿನದ ನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಟ್ವೀಟ್ ಮೂಲಕ ಗೌರವ ಸಮರ್ಪಿಸಿದ್ದಾರೆ. ‘ಲಕ್ಷ್ಮಣ್ ತಮ್ಮ ಮೊನಚುರೇಖೆಗಳ ಮೂಲಕ ಅಂದಿನ ಕಾಲದ ಸಾಮಾಜಿಕ–ರಾಜಕೀಯ ವಾಸ್ತವಗಳನ್ನು ಸೊಗಸಾಗಿ ಚಿತ್ರಿಸಿದ್ದರು’ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
ಶ್ರೀಸಾಮಾನ್ಯನ (ಕಾಮನ್‌ಮ್ಯಾನ್) ಮೂಲಕ ಲಕ್ಷ್ಮಣ್ ಅವರು ತಮ್ಮ ವ್ಯಂಗ್ಯಚಿತ್ರಗಳಲ್ಲಿ ರಾಜಕೀಯ, ಸಾಮಾಜಿಕ ವಿಡಂಬನೆಗಳಿಂದ ಟೈಮ್ಸ್ ಆಫ್ ಇಂಡಿಯಾ ಮತ್ತು ಕೆಲಸ ಮಾಡಿದ್ದ ಇತರ ಪತ್ರಿಕೆಗಳ ಮೂಲಕ ಸುಮಾರು ಏಳು ದಶಕಗಳ ಕಾಲ ಓದುಗರನ್ನು ಆಕರ್ಷಿಸಿದ್ದರು. ಪುಣೆಯಲ್ಲಿ 2015ರ ಜನವರಿಯಲ್ಲಿ ಅವರು 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅವರ ಕೊಡುಗೆಗಳನ್ನು ಮೋದಿ ಶ್ಲಾಘಿಸಿದ್ದಾರೆ. 2018ರಲ್ಲಿ ಲಕ್ಷ್ಮಣ್ ಅವರ ಕುರಿತಾದ ‘ಟೈಮ್‌ಲೆಸ್ ಲಕ್ಷ್ಮಣ್’ ಕೃತಿ ಬಿಡುಗಡೆಯ ವೇಳೆ ತಾವು ಮಾಡಿದ್ದ ಭಾಷಣವನ್ನು ಮೋದಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.