ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ‘ಟಾಯ್‌ಕಥಾನ್–2021’ರ ಸ್ಪರ್ಧಾಳುಗಳೊಂದಿಗೆ ಗುರುವಾರ ವಿಡಿಯೊ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ನವೀನ ಆಟಿಕೆಗಳು ಮತ್ತು ಹೊಸ ಆಟಗಳ ಉಪಾಯಗಳಿಗಾಗಿ ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವಾಲಯ, ಜವಳಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಡಿಪಿಐಐಟಿ, ಎಐಸಿಟಿಇಯು ಜಂಟಿಯಾಗಿ ‘ಟಾಯ್‌ಕಥಾನ್–2021’ ಅನ್ನು ಜನವರಿ 5 ರಂದು ಆಯೋಜಿಸಿತು.
ಇದರಲ್ಲಿ ದೇಶದಾದ್ಯಂತ 1.2 ಲಕ್ಷ ಜನರು ಭಾಗವಹಿಸಿದ್ದು, 17,000ಕ್ಕೂ ಹೆಚ್ಚು ನವೀನ ಯೋಜನೆಗಳು ಸಲ್ಲಿಕೆಯಾಗಿದ್ದವು. ಈ ಪೈಕಿ1,567 ನವೀನ ಯೋಜನೆಗಳು ಮೂರು ದಿನಗಳ ‘ಟಾಯ್‌ಕಥಾನ್–2021’ರ ಅಂತಿಮ ಸುತ್ತಿಗೆ (ಗ್ರ್ಯಾಂಡ್ ಫಿನಾಲೆ) ಆರಿಸಲಾಗಿದೆ. ಇದೇ 22ರಿಂದ 24ರವರೆಗೆ ಆನ್‌ಲೈನ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.