ADVERTISEMENT

ಜ.12 ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ: ಪೊಂಗಲ್‌ ಆಚರಣೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 10:52 IST
Last Updated 31 ಡಿಸೆಂಬರ್ 2021, 10:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಚೆನ್ನೈ: ತಮಿಳುನಾಡಿನ ಬಿಜೆಪಿ ಘಟಕವು ಮದುರೈನಲ್ಲಿ ಜನವರಿ 12 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯ ಸುಗ್ಗಿ ಹಬ್ಬ ಪೊಂಗಲ್‌ ಅನ್ನು ಆಚರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ‘ಮೋದಿ ಪೊಂಗಲ್‌’ ಎಂದೇ ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಇತರ ಚಟುವಟಿಕೆಗಳ ಜೊತೆಗೆ ಹಬ್ಬದಲ್ಲಿ ಪ್ರಮುಖವಾಗಿ ತಮಿಳು ಸಂಸ್ಕೃತಿಯ ಭಾಗವಾದ ಪೊಂಗಲ್‌ ಖಾದ್ಯವನ್ನು ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಮಿಳುನಾಡಿನ ವಿವಿಧೆಡೆ ನಿರ್ಮಿಸಿರುವ 11 ವೈದ್ಯಕೀಯ ಕಾಲೇಜುಗಳನ್ನು ಮೋದಿ ಅವರು ಉದ್ಘಾಟಿಸಲಿದ್ದಾರೆ.ಕಳೆದ ಏಪ್ರಿಲ್‌ 6ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿಯೊಂದಿಗೆ ಡಿಎಂಕೆ ಪಕ್ಷ ಜಯಗಳಿಸಿದ ನಂತರ ತಮಿಳುನಾಡಿಗೆ ಪ್ರಧಾನಿ ಅವರ ಮೊದಲ ಭೇಟಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.