ADVERTISEMENT

ಮೋದಿ ಅಧ್ಯಕ್ಷತೆ: 24ಕ್ಕೆ ನೀತಿ ಆಯೋಗದ ಸಭೆ ನಿಗದಿ

ಪಿಟಿಐ
Published 16 ಮೇ 2025, 12:52 IST
Last Updated 16 ಮೇ 2025, 12:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮೇ 24ರಂದು ನೀತಿ ಆಯೋಗದ ಸಭೆ ನಿಗದಿಯಾಗಿದ್ದು, ಸಭೆಯ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ಗಳು ಹಾಗೂ ಕೇಂದ್ರದ ಹಲವು ಸಚಿವರು ಇದ್ದಾರೆ. ಮೋದಿ ಅವರು ಇದರ ಅಧ್ಯಕ್ಷರಾಗಿದ್ದಾರೆ.

ಪ್ರತಿ ವರ್ಷವೂ ಆಯೋಗದ ಸಭೆ ನಡೆಯುತ್ತದೆ. ಕಳೆದ ವರ್ಷದ ಜುಲೈ 27ರಂದು ಸಭೆ ನಡೆದಿತ್ತು. ಆಯೋಗದ ಮೊದಲ ಸಭೆಯು 2015ರ ಫೆಬ್ರುವರಿ 8ರಂದು ನಡೆದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.