ADVERTISEMENT

ದೆಹಲಿ ಘರ್ಷಣೆ ಕುರಿತು ಸಾರ್ವಜನಿಕರಿಂದ ಸಾಕ್ಷ್ಯ ಕೇಳಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 6:54 IST
Last Updated 28 ಫೆಬ್ರುವರಿ 2020, 6:54 IST
   

ನವದೆಹಲಿ: ಈಶಾನ್ಯಾ ದೆಹಲಿಯಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೂ ತಮ್ಮೊಂದಿಗೆ ಹಂಚಿಕೊಳ್ಳುವಂತೆ ದೆಹಲಿ ಪೊಲೀಸರು ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.

ಘರ್ಷಣೆಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಸಾರ್ವಜನಿಕರು ತಮ್ಮ ಬಳಿ ಇರುವ ವಿಡಿಯೊಗಳನ್ನು ಹಂಚಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

‘ಫೆ. 23ರಿಂದ ದೆಹಲಿಯಲ್ಲಿ ಘರ್ಷಣೆಗಳು ಸಂಭವಿಸಿವೆ. ಈ ಘರ್ಷಣೆಗೆ ಸಾಕ್ಷಿಯಾದ ನಾಗರಿಕರು, ಮುಖ್ಯವಾಗಿ ಮಾಧ್ಯಮದವರು ತಮ್ಮ ಬಳಿ ಇರುವ ಮಾಹಿತಿಯನ್ನು ಅಥವಾ ತಮ್ಮ ಫೋನ್‌, ಕ್ಯಾಮೆರಾಗಳ ಮೂಲಕ ಸೆರೆ ಹಿಡಿದ, ದೃಶ್ಯ, ವಿಡಿಯೊಗಳನ್ನು ಮುಂದೆ ಬಂದು ಹಂಚಿಕೊಳ್ಳಬಹುದು. ಏಳು ದಿನಗಳ ಒಳಗಾಗಿ ನಮಗೆ ಮಾಹಿತಿ ತಲುಪಿಸಿ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು,’ ಎಂದೂ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಪೊಲೀಸರ ನಡೆ

ಮಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ವೇಳೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದರು. ಗಲಭೆ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದ ಪೊಲೀಸರು ಇದೇ ರೀತಿ ಟ್ವಿಟರ್‌ನಲ್ಲಿ ಜನರಿಂದ ಸಾಕ್ಷ್ಯ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.