ADVERTISEMENT

ದೆಹಲಿ ಹಿಂಸಾಚಾರದ ತನಿಖೆ ಚುರುಕು: ಎರಡು ಪ್ರತ್ಯೇಕ ಕೊಲೆ ಪ್ರಕರಣ, 11 ಮಂದಿ ಬಂಧನ

ಏಜೆನ್ಸೀಸ್
Published 12 ಮಾರ್ಚ್ 2020, 9:44 IST
Last Updated 12 ಮಾರ್ಚ್ 2020, 9:44 IST
ದೆಹಲಿ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ
ದೆಹಲಿ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ   

ನವದೆಹಲಿ (ಪಿಟಿಐ): ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರುಮುಖ್ಯಪೇದೆ ಕೊಲೆ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಸಂಬಂಧ 11ಮಂದಿಯನ್ನು ಬಂಧಿಸಿದ್ದಾರೆ.

ಫೆಬ್ರವರಿ 24ರಂದುಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಮುಖ್ಯಪೇದೆ ರತನ್ ಲಾಲ್‌ ಎಂಬುವರನ್ನುಅಪರಿಚಿತರು ಗುಂಡಿಟ್ಟು ಕೊಲೆ ಮಾಡಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿಪೊಲೀಸರು ಹಲವು ಸಾಕ್ಷಿಗಳನ್ನು ಏಳು ಮಂದಿಆರೋಪಿಗಳನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದದಿನವೇ ಆರೋಪಿಗಳು ಸಂಚು ರೂಪಿಸಿ ಮುಖ್ಯಪೇದೆ ರತನ್ ಲಾಲ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಾಲ್ವರಬಂಧನ

ದೆಹಲಿ ಹಿಂಸಾಚಾರದ ವೇಳೆ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣಕ್ಕೆ ಸಂಬಂಧ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.

ಹಿಂಸಾಚಾರದ ವೇಳೆ ಅಕ್ಬರಿ ಬೇಗಂ ಅವರ ಶವ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿದ್ದರು.

ನಾಲ್ಕು ಮಂದಿಯ ಶವಗಳು ಚರಂಡಿಯಲ್ಲಿ ದೊರೆತಿದ್ದವು. ಅವುಗಳಲ್ಲಿ ಅಕ್ಬರಿ ಬೇಗಂ ಶವ ಕೂಡ ಒಂದು. ಅಕ್ಬರಿ ಅವರನ್ನು ಕೊಲೆ ಮಾಡಿದ ಆರೋಪಿಗಳು ಶವವನ್ನು ಚರಂಡಿಯಲ್ಲಿ ಹೂತುಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.