ADVERTISEMENT

ಕವಿ ಇಮ್ರಾನ್ ಪ್ರತಾಪ್‌ಗಢಿ ವಿರುದ್ಧ ಪ್ರಕರಣ ದಾಖಲು

ಪ್ರಚೋದನಕಾರಿ ಭಾಷಣ ಆರೋಪ

ಪಿಟಿಐ
Published 26 ಫೆಬ್ರುವರಿ 2020, 19:55 IST
Last Updated 26 ಫೆಬ್ರುವರಿ 2020, 19:55 IST
ಇಮ್ರಾನ್ ಪ್ರತಾಪ್‌ಗಢಿ
ಇಮ್ರಾನ್ ಪ್ರತಾಪ್‌ಗಢಿ   

ಹೈದರಾಬಾದ್ : ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ವಿರುದ್ಧ ಆಯೋಜಿಸಲಾಗಿದ್ದ ರ್ಯಕ್ರಮವೊಂದರಲ್ಲಿ, ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕವಿ ಇಮ್ರಾನ್ ಪ್ರತಾಪಗಢಿ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೈದರಾಬಾದ್‌ನಲ್ಲಿ ಇದೇ 24ರಂದು (ಸೋಮವಾರ) ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಮ್ರಾನ್, ‘ಹೈದರಾಬಾದ್‌ನಲ್ಲಿ ಶಾಹೀನ್‌ ಬಾಗ್ ಏಕೆ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ’ ಎಂದು ಹೇಳಿದ್ದರು. ಇದು ಪ್ರಚೋದನಕಾರಿ’ ಎಂದು ಪೊಲೀಸರು ಬುಧವಾರ ವಿವರಿಸಿದ್ದಾರೆ.

‘ಸಂಜೆ 6ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಸಲು ಸಂಘಟಕರಿಗೆ ಅನುಮತಿ ನೀಡಲಾಗಿತ್ತು. ಆದರೆ 9.48ರವರೆಗೆ ಕಾರ್ಯಕ್ರಮ ಮುಂದುವರಿಸಲಾಗಿತ್ತು’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.