ADVERTISEMENT

ಉಗ್ರ ಸಂಘಟನೆ ಸೇರಿದ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 18:06 IST
Last Updated 1 ಅಕ್ಟೋಬರ್ 2018, 18:06 IST
ಎಸ್‌ಪಿಒ ಆದಿಲ್‌ ಬಶೀರ್‌ ಹಿಜಬುಲ್‌ ಮುಜಾಹಿದ್ದೀನ್‌ ಉಗ್ರರೊಂದಿಗಿರುವ ಚಿತ್ರ
ಎಸ್‌ಪಿಒ ಆದಿಲ್‌ ಬಶೀರ್‌ ಹಿಜಬುಲ್‌ ಮುಜಾಹಿದ್ದೀನ್‌ ಉಗ್ರರೊಂದಿಗಿರುವ ಚಿತ್ರ   

ಶ್ರೀನಗರ: ಶಾಸಕರ ನಿವಾಸದಿಂದ ಎಕೆ 47 ರೈಫಲ್‌ಗಳು ಹಾಗೂ ಪಿಸ್ತೂಲ್‌ ಕಾಣೆಯಾದ ಪ್ರಕರಣದ ಆರೋಪಿ, ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬ (ಎಸ್‌ಪಿಒ) ಹಿಜಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಸದಸ್ಯರ ಜೊತೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಪಿಡಿಪಿ ಶಾಸಕ ಐಜಾಝ್‌ ಮಿರ್‌ನ ಎಸ್‌ಪಿಒ ಆಗಿ ನಿಯೋಜನೆಗೊಂಡಿದ್ದ ಆದಿಲ್‌ ಬಶೀರ್‌ ಉಗ್ರರೊಂದಿಗೆ ಕೈಜೋಡಿಸಿರುವ ಅಧಿಕಾರಿ.

ಶಾಸಕನ ನಿವಾಸದಿಂದ ಕಳೆದ ವಾರ ಏಳು ಎಕೆ 47 ರೈಫಲ್‌ಗಳು ಹಾಗೂ ಪರವಾನಗಿ ಹೊಂದಿದ್ದ ಪಿಸ್ತೂಲ್‌ ಕಾಣೆಯಾಗಿತ್ತು. ಸ್ಥಳೀಯ ನಿವಾಸಿಯ ಸಹಕಾರದೊಂದಿಗೆ ಬಶೀರ್‌ ಈ ಆಯುಧಗಳನ್ನು ಕದ್ದೊಯ್ದಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.