ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಮುಂಬೈನ ಸೀಟು ಹಂಚಿಕೆ ವಿಚಾರವು ಮಹಾ ವಿಕಾಸ ಆಘಾಡಿ ಮೈತ್ರಿಕೂಟಕ್ಕೆ ಕಗ್ಗಂಟಾಗುವ ಸಾಧ್ಯತೆಗಳಿವೆ.
ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ ಸೀಟು ಹಂಚಿಕೆ ಬಗೆಗಿನ ಮಾತುಕತೆಯು ಪ್ರಗತಿಯಲ್ಲಿದೆ.
ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳಲ್ಲಿ ಮುಂಬೈ 36 ಸ್ಥಾನಗಳನ್ನು ಹೊಂದಿದೆ.
36 ಸ್ಥಾನಗಳಲ್ಲಿ, ಶಿವಸೇನಾವು(ಉದ್ಧವ್ ಬಣ) 20ರಿಂದ 25 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಕಾಂಗ್ರೆಸ್ 15ರಿಂದ 20 ಸೀಟುಗಳನ್ನು ಕೇಳುತ್ತಿದೆ. ಎನ್‌ಸಿಪಿಯು(ಶರದ್ ಬಣ) ಏಳರಿಂದ ಎಂಟು ಸ್ಥಾನಗಳ ನಿರೀಕ್ಷೆಯಲ್ಲಿದೆ. ಜೊತೆಗೆ ಸಮಾಜವಾದಿ ಸೇರಿದಂತೆ ಮೈತ್ರಿಕೂಟದ ಇತರ ಪಕ್ಷಗಳಿಗೂ ಕೆಲ ಸ್ಥಾನಗಳನ್ನು ನೀಡಬೇಕಾದ ಅನಿವಾರ್ಯ ಇದೆ.
‘ಸೀಟು ಹಂಚಿಕೆ ಮಾತುಕತೆಯು 99 ಶೇಕಡ ಪೂರ್ಣಗೊಂಡಿದೆ’ ಎಂದು ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ಹೇಳಿಕೊಂಡಿದ್ದರು ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ(ಶರದ್ ಬಣ) ಅದನ್ನು ತಿರಸ್ಕರಿಸಿವೆ.
ಮೂರೂ ಪಕ್ಷಗಳು ಮುಂಬೈನಲ್ಲಿ ಸರಣಿ ಚುನಾವಣಾ ಸಭೆಗಳನ್ನು ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.