ADVERTISEMENT

ದೆಹಲಿ ಮಾಲಿನ್ಯ: 20 ಸಿಗರೇಟ್ ಸೇದುವುದಕ್ಕೆ ಸಮ!

ಪಿಟಿಐ
Published 3 ನವೆಂಬರ್ 2018, 14:26 IST
Last Updated 3 ನವೆಂಬರ್ 2018, 14:26 IST
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯರಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು –ರಾಯಿಟರ್ಸ್ ಚಿತ್ರ
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯರಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು –ರಾಯಿಟರ್ಸ್ ಚಿತ್ರ   

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಭಾವ ಎಷ್ಟಿದೆಯೆಂದರೆ, ದಿನವೊಂದಕ್ಕೆ 15–20 ಸಿಗರೇಟ್ ಸೇದಿದರೆ ಆಗುವ ಪರಿಣಾಮಕ್ಕೆ ಅದು ಸಮನಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇಲ್ಲಿನ ಗಂಗಾರಾಮ್ ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ಫೌಂಡೇಷನ್‌ ಮುಖ್ಯಸ್ಥ ಡಾ. ಅರವಿಂದ್ ಕುಮಾರ್ ಅವರು ರಾಜಧಾನಿಯ ವಾಯುಮಾಲಿನ್ಯದಿಂದ ಜನರ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳನ್ನು ವಿವರಿಸಿದ್ದಾರೆ.

‘ನಾನು ಕಳೆದ 30 ವರ್ಷಗಳಿಂದ ಜನರ ಶ್ವಾಸಕೋಶಗಳ ಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಸಿಗರೇಟು ಸೇದುವವರ ಶ್ವಾಸಕೋಶಗಳು ಕಪ್ಪಾಗಿ ಕಂಡುಬಂದರೆ, ಉಳಿದವರದ್ದು ಗುಲಾಬಿ ಬಣ್ಣದಲ್ಲಿ ಇರುತ್ತಿತ್ತು. ಆದರೆ ವಾಯುಮಾಲಿನ್ಯದ ಪರಿಣಾಮ, ಎಲ್ಲರಲ್ಲೂ ಕಪ್ಪು ಶ್ವಾಸಕೋಶಗಳು ಕಾಣುತ್ತಿವೆ. ಇದು ಭಯಾನಕ’ ಎಂದು ಅರವಿಂದ್ ಕುಮಾರ್ ಹೇಳಿದ್ದಾರೆ.

ADVERTISEMENT

ಮಲಿನಯುಕ್ತ ವಾಯುಕಣಗಳು ಶ್ವಾಸಕೋಶ ಪ್ರವೇಶಿಸಿದಾಗ ಅಲ್ಲಿ ಆಗುವ ಬದಲಾವಣೆಗಳು ಹೇಗಿರುತ್ತವೆ ಎಂದು ಬಿಂಬಿಸುವ ಪ್ರದರ್ಶನವನ್ನು ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು. ಲಂಗ್‌ ಕೇರ್ ಫೌಂಡೇಷನ್ ವತಿಯಿಂದ ‘ಹೆಲ್ಪ್ ದೆಹಲಿ ಬ್ರೀತ್ ಇನಿಷಿಯೇಟಿವ್’ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.