ADVERTISEMENT

ಪಪುವಾ ನ್ಯುಗಿನಿಯಲ್ಲಿ ಭೂಕಂಪ: 125 ಸಾವು, ಸುನಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 16:18 IST
Last Updated 14 ಮೇ 2019, 16:18 IST
   

ಸಿಡ್ನಿ: ಪಪುವಾ ನ್ಯುಗಿನಿಯಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದ್ದು 125 ಜನರು ಸಾವನ್ನಪಿದ್ದಾರೆ.

7.5ರಷ್ಟು ತೀವ್ರತೆಯ ಭೂಕಂಪ ಉಂಟಾಗಿದ್ದು, ಕರಾವಳಿ ತೀರದಲ್ಲಿ ಸುನಾಮಿ ಉಂಟಾಗಬಹುದು ಎಂದು ಅಮೆರಿಕದ ಭೂ ವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ.

ಪಪುವಾನ್ಯುಗಿನಿಯಾ ಈಶಾನ್ಯ ಭಾಗದಲ್ಲಿರುವ ಕೊಕೊಪೊ ಸಣ್ಣ ಪಟ್ಟಣದಲ್ಲಿ ಸಾಕಷ್ಟು ಹಾನಿಯಾಗಿದೆ. ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು 125 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಪುವಾ ನ್ಯುಗಿನಿ, ಇಂಡೋನೇಷ್ಯಾಸೇರಿದಂತೆ ಇತರ ಧ್ವೀಪಗಳು ಹಾಗೂ ಫೆಸಿಪಿಕ್‌ ಸಾಗರದ ಕರಾವಳಿ ತೀರಕ್ಕೆ ಸುನಾಮಿ ಅಪ್ಪಳಿಸಬಹುದು ಎಂದು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಕೇಂದ್ರ ಬಿಂದು 42 ಕಿ.ಮೀ. ಭೂಮಿಯಾಳದಲ್ಲಿತ್ತು ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.