ADVERTISEMENT

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾ‍ಪನೆ, ರೈತರ ಖಾತೆಗೆ ₹6 ಸಾವಿರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 10:11 IST
Last Updated 1 ಫೆಬ್ರುವರಿ 2019, 10:11 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಅನ್ನದಾತರ ನೆರವಿಗೆ ನಿಲ್ಲಲು‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾಪನೆಗೆ ಸ‌ಮ್ಮತಿಸಿದೆ. ರೈತರ ಖಾತೆಗೆ ವಾರ್ಷಿಕ ₹6,000 ಬರಲಿದೆ.

ಶುಕ್ರವಾರ ಬಜೆಟ್‌ ಮಂಡಿಸಿದ ವಿತ್ತ ಸಚಿವ ಪಿಯೂಷ್ ಗೋಯಲ್‌ ರೈತರ ಆರ್ಥಿಕ ವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಹೊಸ ಯೋಜನೆಯನ್ನು ಪ್ರಕಟಿಸಿದರು.

* ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಅಡಿ 2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಈ ಸೌಲಭ್ಯ ದೊರೆಯಲಿದೆ.

ADVERTISEMENT

* ಈ ಯೋಜನೆ ಅಡಿ ₹6,000 ಮೂರು ಕಂತುಗಳಲ್ಲಿ ತಲಾ ₹2,000ದಂತೆ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ಜಮೆ ಮಾಡಲಿದೆ.

* ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಿಂದ 12 ಕೋಟಿ ಸಣ್ಣ ರೈತರಿಗೆ ಅನುಕೂಲವಾಗಲಿದೆ.

* 2019–20ನೇ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ₹75 ಸಾವಿರ ಕೋಟಿ ಮೀಸಲಿಡಲು ಪ್ರಸ್ತಾಪಿಸಲಾಗಿದೆ.

* ವಸಕ್ತ ಹಣಕಾಸು ವರ್ಷದಿಂದಲೇ ಈ ಯೋಜನೆ ಜಾರಿಯಾಗುವುದರಿಂದ 2018–19ನೇ ಸಾಲಿನಲ್ಲಿ ₹20 ಸಾವಿರ ಕೋಟಿ ಮೀಸಲಿಡಲು ಉದ್ದೇಶಿಸಲಾಗಿದೆ.

* ಯೋಜನೆ 2018ರ ಡಿಸೆಂಬರ್‌ 1ರಿಂದ ಅನ್ವಯವಾಗುತ್ತದೆ.

* ಪ್ರಸಕ್ತ ವರ್ಷದ ಮೊದಲ ಕಂತು 2019ರ ಮಾರ್ಚ್‌ 31 ಆಗಿದ್ದು, ಈ ಅವಧಿಯಲ್ಲಿ ರೈತರಿಗೆ ಸಂದಾಯವಾಗಲಿದೆ.

* ಈ ಮೊತ್ತವನ್ನು ಕೇಂದ್ರ ಸರ್ಕಾರವೇ ರೈತರ ಖಾತೆಗೆ ತುಂಬಲಿದೆ.

* ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಕೇವಲ ದುರ್ಬಲ ರೈತರ ಕುಟುಂಬಗಳಿಗೆ ಪೂರಕ ಆದಾಯ ಒದಗಿಸುವ ಭರವಸೆ ಮಾತ್ರವಲ್ಲ,ವಿಶೇಷವಾಗಿ ತುರ್ತು ಅಗತ್ಯಗಳಿಗೆ ನೆರವಾಗಲಿದೆ. ವಿಶೇಷವಾಗಿ ಬೆಳೆ ಕೊಯ್ಲು ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಲಿದೆ’ ಎಂದು ಹಣಕಾಸು ಸಚಿವ ಪಿಯೂಷ್‌ ಗೊಯಲ್‌ ತಿಳಿಸಿದರು.

ಸಾಲ ಮರುಪಾವತಿಗೆ ಬಡ್ಡಿ ಕಡಿತ
ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರೈತರು ಕೃಷಿಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ಮರು ಹೊಂದಾಣಿಕೆ ಮಾಡಿದ ಅವಧಿಯ ಮೊದಲ ವರ್ಷದ ಸಾಲದ ಮೇಲಿನ ಬಡ್ಡಿಗೆ ಶೇಕಡಾ2ರಷ್ಟು ರಿಯಾಯಿತಿ ಸಿಗುತ್ತದೆ. ಈ ರೀತಿ ಮರು ಹೊಂದಾಣಿಕೆ ಮಾಡಿದ ಪೂರ್ಣ ಅವಧಿಗೆ ಸಾಲ ಮರುಪಾವತಿ ಮೇಲಿನ ಬಡ್ಡಿಗೆ ಮುಂದಿನ ದಿನಗಳಲ್ಲಿ ಶೇಕಡಾ3ರ ರಿಯಾಯಿತಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ವಿತ್ತ ಸಚಿವ ತಿಳಿಸಿದರು.

* ರೈತರಿಗೆ ಕನಿಷ್ಠ ಬೆಂಬಲ ಬೆಲೆ(‌ಎಂಎಸ್‌ಪಿ) 1.5‍ಪಟ್ಟು ಹೆಚ್ಚಳ ಮಾಡಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.