ADVERTISEMENT

ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ನಾನಿಲ್ಲ: ಪ್ರಫುಲ್ ಪಟೇಲ್

ಪಿಟಿಐ
Published 3 ಫೆಬ್ರುವರಿ 2026, 14:42 IST
Last Updated 3 ಫೆಬ್ರುವರಿ 2026, 14:42 IST
<div class="paragraphs"><p>ಪ್ರಫುಲ್ ಪಟೇಲ್</p></div>

ಪ್ರಫುಲ್ ಪಟೇಲ್

   

ಮುಂಬೈ: ಅಜಿತ್‌ ಪವಾರ್‌ ನಿಧನದಿಂದ ತೆರವಾಗಿರುವ ಎನ್‌ಸಿಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ತಾವು ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.

‘ಅಜಿತ್‌ ಪವಾರ್‌ ನಿಧನದ ನಂತರ ಪಕ್ಷದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಂಬಂಧಪಡದವರು ಮಾತನಾಡುತ್ತಿದ್ದಾರೆ’ ಎಂದು ಎನ್‌ಸಿಪಿಯ ಕಾರ್ಯಾಧ್ಯಕ್ಷರೂ ಆಗಿರುವ ಪ್ರಫುಲ್ ಹೇಳಿದರು.

ADVERTISEMENT

‘ಶಾಸಕಾಂಗ ಪಕ್ಷದ ನಾಯಕರಾಗಿ ಸುನೇತ್ರಾ ಪವಾರ್ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಹಕ್ಕು. ನಮ್ಮ ಸದಸ್ಯರ ಭಾವನೆಗಳನ್ನು ಪರಿಗಣಿಸಿ ನಿರ್ಧಾರ ಕೈಗೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.