ADVERTISEMENT

ಪ್ರಜಾಮತ: ನುಡಿ–ಕಿಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:38 IST
Last Updated 3 ಏಪ್ರಿಲ್ 2019, 18:38 IST
ಮೇನಕಾ ಗಾಂಧಿ
ಮೇನಕಾ ಗಾಂಧಿ   

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಬೇಕು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಮೌನವಾಗಿದೆ. ಒಮರ್ ಅವರ ನ್ಯಾಷನಲ್ ಕಾನ್ಫರೆನ್ಸ್ ಜತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವಕಾಂಗ್ರೆಸ್, ಮಿತ್ರಪಕ್ಷದ ಬೇಡಿಕೆಯನ್ನು ಒಪ್ಪುವುದೇ ಇಲ್ಲವೇ ಎಂದು ದೇಶದ ಜನರಿಗೆ ಸ್ಪಷ್ಟಪಡಿಸಬೇಕು

ಅಮಿತ್ ಶಾ, ಬಿಜೆಪಿ ಅಧ್ಯಕ್ಷ

***

ADVERTISEMENT

ವ್ಯಕ್ತಿಯೊಬ್ಬನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದರೆ, ಅಂತಹ ವ್ಯಕ್ತಿ ಸಂಸತ್ ಪ್ರವೇಶಿಸುವುದನ್ನು ತಡೆಯಬೇಕು. ಆತ ಯಾವುದೇ ಪಕ್ಷ, ಜಾತಿ, ಸಮುದಾಯಕ್ಕೆ ಸೇರಿದ್ದರೂ ಇದು ಅನ್ವಯ ಆಗಬೇಕು. ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಗಮನ ಹರಿಸಬೇಕು. ಹಾರ್ದಿಕ್ ಪಟೇಲ್‌ಗೆ ಸ್ಪರ್ಧಿಸಲು ನಿರ್ಬಂಧ ಇರುವಾಗ ಕನ್ಹಯ್ಯಾ ಕುಮಾರ್‌ಗೆ ಏಕೆ ಇಲ್ಲ?

ಸಂಜಯ್ ರಾವತ್, ಶಿವಸೇನಾ ಸಂಸದ

***

ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಪಕ್ಷದವರನ್ನೇ ಬಿಡುವುದಿಲ್ಲ. ಅಂಥದ್ದರಲ್ಲಿ ರಾಜ್ಯ–ದೇಶವನ್ನು ಬಿಡುತ್ತಾರಾ? ಹಣ ಇಲ್ಲದಿದ್ದರೆ ಅವರು ಏನನ್ನೂ ಮಾಡುವುದಿಲ್ಲ. ದುಡ್ಡುಪಡೆಯದೇ ಪಕ್ಷದ ಟಿಕೆಟ್‌ಗಳನ್ನು ಅವರು ಯಾರಿಗೂ ನೀಡುವುದಿಲ್ಲ. ಮಾಯಾವತಿ ಅವರು ‘ಟಿಕೆಟ್‌ ವ್ಯಾಪಾರಿ’

ಮೇನಕಾ ಗಾಂಧಿ, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.