ADVERTISEMENT

ಅಪ್ಪ ಇನ್ನೂ ಬದುಕಿದ್ದಾರೆ; ಸುಳ್ಳು ಸುದ್ದಿ ಹಬ್ಬಿಸಬೇಡಿ: ಪ್ರಣವ್ ಮುಖರ್ಜಿ ಪುತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2020, 4:24 IST
Last Updated 13 ಆಗಸ್ಟ್ 2020, 4:24 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ವಿಧಿವಶರಾಗಿದ್ದಾರೆ#ripPranabMukherjee ಎಂದು ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಪ್ರಣವ್ ಮುಖರ್ಜಿ ಇನ್ನಿಲ್ಲ ಎಂಬ ವಿಷಯ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಪ್ರಣವ್ ಮುಖರ್ಜಿ ಪುತ್ರ ಅಭಿಜಿತ್ ಬ್ಯಾನರ್ಜಿ ನಮ್ಮ ಅಪ್ಪ ಇನ್ನೂ ಬದುಕಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಟ್ವೀಟಿಸಿದ್ದಾರೆ.

ನನ್ನ ತಂದೆ ಪ್ರಣವ್ಮುಖರ್ಜಿ ಇನ್ನೂ ಜೀವಂತವಾಗಿದ್ದಾರೆ ಮತ್ತು ಆರೋಗ್ಯ ಸ್ಥಿತಿಸ್ಥಿರವಾಗಿದೆ.
ಹೆಸರಾಂತ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿರುವ ಊಹಾಪೋಹಗಳು ಮತ್ತು ಸುಳ್ಳುಸುದ್ದಿಗಳು ಭಾರತದಲ್ಲಿ ಮಾಧ್ಯಮವು ಸುಳ್ಳುಸುದ್ದಿಗಳ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಅಭಿಜಿತ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.