ADVERTISEMENT

ಪ್ರಣಬ್ ಮುಖರ್ಜಿ ಅವರ ಸ್ಮರಣ ಸಂಚಿಕೆ ನಾಲ್ಕನೇ ಆವೃತ್ತಿ ಶೀಘ್ರ

ಪಿಟಿಐ
Published 11 ಡಿಸೆಂಬರ್ 2020, 12:03 IST
Last Updated 11 ಡಿಸೆಂಬರ್ 2020, 12:03 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನವದೆಹಲಿ: ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರು ಪಶ್ಚಿಮ ಬಂಗಾಳದ ಕುಗ್ರಾಮವೊಂದರಿಂದ ರಾಷ್ಟ್ರಪತಿ ಭವನದವರೆಗೂ ನಡೆದುಬಂದ ದಾರಿಯ ಚಿತ್ರಣ ಒಳಗೊಂಡ ಕೃತಿ ಶೀಘ್ರದಲ್ಲಿಯೇ ಬರಲಿದೆ.

‘ದ ಪ್ರೆಸಿಡೆನ್ಷಿಯಲ್ ಇಯರ್ಸ್‌‌’ ಹೆಸರಿನ ಸ್ಮರಣಾಸಂಚಿಕೆಯು ವಿಶ್ವದಾದ್ಯಂತ 2021ರ ಜನವರಿಯಲ್ಲಿ ಪ್ರಕಟವಾಗಲಿದೆ ಎಂದು ಪ್ರಕಾಶನ ಸಂಸ್ಥೆ ರೂಪಾ ಬುಕ್ಸ್ ಶುಕ್ರವಾರ ಪ್ರಕಟಿಸಿತು.

ಮುಖರ್ಜಿ ಅವರ ನೆನಪುಗಳ ಸಂಚಿಕೆಯ ನಾಲ್ಕನೇ ಆವೃತ್ತಿಯು, ಅಧ್ಯಕ್ಷರಾಗಿ ಅವರು ಎದುರಿಸಿದ ಸವಾಲುಗಳು, ಕೈಗೊಂಡ ಕ್ಲಿಷ್ಟಕರ ನಿರ್ಧಾರಗಳು, ಸಾಂವಿಧಾನಿಕ ಜವಾಬ್ದಾರಿ ನಿಭಾಯಿಸುವಲ್ಲಿನ ಪ‍ರಿಸ್ಥಿತಿ ಕುರಿತ ವಿವರಗಳನ್ನು ಒಳಗೊಂಡಿದೆ.

ADVERTISEMENT

ಈ ಸ್ಮರಣ ಸಂಚಿಕೆಯಲ್ಲಿ ಮುಖರ್ಜಿ ಅವರು ಎರಡು ಭಿನ್ನ, ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಪ್ರಧಾನಮಂತ್ರಿಗಳ ಅವಧಿಯ ನೆನಪುಗಳಿವೆ ಎಂದು ಪ್ರಕಾಶನ ಸಂಸ್ಥೆಯು ತಿಳಿಸಿದೆ.

ಅಪರೂಪದ ಚಿತ್ರಗಳು, ಕೈಬರಹದ ಟಿಪ್ಪಣಿಗಳು ಇರುವ ಈ ಸ್ಮರಣ ಸಂಚಿಕೆಯು ದಿವಂಗತ ರಾಷ್ಟ್ರಪತಿಯವರ ಜೀವಿತಾವಧಿಯ ಪ್ರಮುಖ ಕ್ಷಣಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.