ADVERTISEMENT

ಮತ ಎಣಿಕೆ ದಿನ ಯೋಜಿತ ಗಲಭೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ವೈಎಸ್‌ಆರ್‌ಸಿಪಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 10:06 IST
Last Updated 30 ಏಪ್ರಿಲ್ 2019, 10:06 IST
   

ಹೈದರಾಬಾದ್‌: ಮತ ಎಣಿಕೆ ಸಂದರ್ಭದಲ್ಲಿ ಪೂರ್ವಯೋಜಿತ ಗಲಭೆಗಳು ನಡೆಯಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಯುವಜನ ಶ್ರಮಿಕ ರೈತು ಕಾಂಗ್ರೆಸ್‌ ಪಕ್ಷ(ವೈಎಸ್‌ಆರ್‌ಸಿಪಿ) ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.

ಪತ್ರದಲ್ಲಿ, ‘ಆಡಳಿತ ಪಕ್ಷದ ಪರ ಎಣಿಕೆ ಪ್ರತಿನಿಧಿಗಳು 17–ಸಿ ಫಾರಂ ಅನ್ನು ನಕಲು ಮಾಡಬಹುದು ಮತ್ತುಮತ ಎಣಿಕೆ ಕೇಂದ್ರಗಳಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದು ಪ್ರಕ್ರಿಯೆ ವಿಳಂಬವಾಗುವಂತೆ ಮಾಡಬಹುದು. ಏಜೆಂಟ್‌ಗಳ ದಾಖಲೆಗಳ ಪರಿಶೀಲನೆ ಹಾಗೂ ಅನುಮೋದನೆ ಪ್ರಕ್ರಿಯೆಯೂ ವಿಳಂಬವಾಗಲಿದ್ದು, ಗಲಾಟೆ ಆಗಲಿದೆ. ಹಾಗಾಗಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಲಾಗಿದೆ.

ಎಲ್ಲ ಮತಎಣಿಕೆ ಕೇಂದ್ರಗಳ ಸಂಭಾಂಗಣದಲ್ಲಿ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಪಕ್ಷ, ಎಣಿಕೆ ಕೇಂದ್ರದ ಬಳಿ ಸೆಕ್ಷನ್‌ 144 ಜಾರಿಗೊಳಿಸಬೇಕು ಎಂದೂ ಕೋರಿದೆ.

ADVERTISEMENT

ಯೋಜಿತ ಗಲಭೆ ಕುರಿತುವೈಎಸ್‌ಆರ್‌ಸಿಪಿ ಆತಂಕವ್ಯಕ್ತಪಡಿಸಿ ಪತ್ರ ಬರೆದಿರುವುದನ್ನು ಚುನಾವಣಾ ಆಯೋಗದ ಆಯುಕ್ತ ಸುನೀಲ್‌ ಅರೋರ ಗಂಭೀರವಾಗಿ ಪರಿಗಣಿಸಿದ್ದಾರೆ. ವೈಎಸ್‌ಆರ್‌ಸಿಯ ಸಂಸದ ವಿಜಯ ಸಾಯಿ ರೆಡ್ಡಿ ಅವರು ಈ ಪತ್ರ ಬರೆದಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಲೋಕಸಭೆಯ 25 ಹಾಗೂ ವಿಧಾನಸಭೆಯ 175 ಸ್ಥಾನಗಳಿಗೆ ಏಪ್ರಿಲ್ 11ರಂದು ಚುನಾವಣೆ ನಡೆದಿದ್ದು, ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.