ADVERTISEMENT

ಕೇರಳ: ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ 3 ಆಸ್ಪತ್ರೆ ವಿರುದ್ಧ ಪ್ರಕರಣ

ಪಿಟಿಐ
Published 18 ಸೆಪ್ಟೆಂಬರ್ 2021, 9:51 IST
Last Updated 18 ಸೆಪ್ಟೆಂಬರ್ 2021, 9:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಮೂರು ಆಸ್ಪತ್ರೆಗಳು ನಿರಾಕರಿಸಿವೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣದಾಖಲಿಸಿದೆ.

‘ಕೊಲ್ಲಂ ಜಿಲ್ಲೆಯ ಕಲ್ಲುವತ್ತುಕಲ್‌ ಗ್ರಾಮದ ನಿವಾಸಿಯಾಗಿರುವ 8 ತಿಂಗಳ ಗರ್ಭಿಣಿ ಮೀರಾ ಅವರಲ್ಲಿ ತಳಮಳ ಉಂಟಾಗಿತ್ತು. ಅವರು ತಮ್ಮ ಮನೆಯ ಹತ್ತಿರದ ಎರಡು ಆಸ್ಪತ್ರೆ ಮತ್ತು ಅವಿಟ್ಟಂ ತಿರುನಾಲ್ ಆಸ್ಪತ್ರೆ ಮೊರೆ ಹೋಗಿದ್ದರು. ಆದರೆ, ಈ ಮೂರು ಆಸ್ಪತ್ರೆಗಳು ಮೀರಾ ಅವರನ್ನು ದಾಖಲಿಸಲು ನಿರಾಕರಿಸಿದ್ದವು’ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಈ ಬಳಿಕ ಕೊಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೀರಾ ಅವರನ್ನು ದಾಖಲಿಸಿ, ಹೆರಿಗೆ ಮಾಡಿಸಲಾಯಿತು. ಆದರೆ, ಮಗು ಆರು ದಿನಗಳ ಹಿಂದೆಯೇಗರ್ಭದಲ್ಲಿ ಮೃತಪಟ್ಟಿತ್ತು’ ಎಂದು ಆಯೋಗವು ತಿಳಿಸಿದೆ.

ADVERTISEMENT

ಈ ಬಗ್ಗೆ ತನಿಖೆ ನಡೆಸುವಂತೆ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿಗೆ ಆಯೋಗದ ಸದಸ್ಯೆ ವಿ.ಕೆ ಬೀನಾ ಕುಮಾರಿ ಅವರು ಸೂಚಿಸಿದ್ದಾರೆ.

ಈ ಸಂಬಂಧ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.