ADVERTISEMENT

ಗುರುನಾನಕ್‌ ಜಯಂತಿ: ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2025, 7:07 IST
Last Updated 5 ನವೆಂಬರ್ 2025, 7:07 IST
<div class="paragraphs"><p>ಗುರುನಾನಕ್‌</p></div>

ಗುರುನಾನಕ್‌

   

ನವದೆಹಲಿ: ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

‘ಶ್ರೀ ಗುರುನಾನಕ್ ದೇವ್ ಜಿ ಅವರ ಜೀವನ ಮತ್ತು ಸಂದೇಶವು ಮಾನವಕುಲಕ್ಕೆ ಕಾಲಾತೀತ ಜ್ಞಾನದೊಂದಿಗೆ ಮಾರ್ಗದರ್ಶನ ನೀಡುತ್ತಲೇ ಇದೆ. ಅವರ ಕರುಣೆ, ಸಮಾನತೆ, ನಮ್ರತೆ ಮತ್ತು ಸೇವೆಯ ಬೋಧನೆಗಳು ಬಹಳ ಸ್ಪೂರ್ತಿದಾಯಕವಾಗಿವೆ. ಎಲ್ಲರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಗುರುನಾನಕ್ ದೇವ್ ಜಿ ಅವರು ಸಿಖ್ಖರ ಮೊದಲ ಗುರು ಮಾತ್ರವಲ್ಲ, ಬದಲಾಗಿ ವಿಶ್ವ ನಾಯಕರೂ ಆಗಿದ್ದರು. ಅವರು (ಗುರುನಾನಕ್) ಸದಾ ಮಾನವೀಯತೆಯ ಬಗ್ಗೆ ಚಿಂತಿಸುತ್ತಿದ್ದರು. ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುತ್ತಿದ್ದರು. ವ್ಯಾಂಕೋವರ್‌ನಿಂದ ವಾಲಿಂಗ್ಟನ್‌ವರೆಗೆ ಮತ್ತು ಸಿಂಗಪುರದಿಂದ ದಕ್ಷಿಣ ಆಫ್ರಿಕಾದವರೆಗೆ ಅವರ ಸಂದೇಶಗಳು ಪ್ರತಿಯೊಂದು ಮೂಲೆಯಲ್ಲೂ ಪ್ರತಿಧ್ವನಿಸುತ್ತವೆ. ಹಾಗೆಯೇ ಭಾರತೀಯರಲ್ಲಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸುವುದರ ಮೂಲಕ ಇಡೀ ರಾಷ್ಟ್ರವನ್ನು ಒಗ್ಗೂಡಿಸಿದ್ದಾರೆ’ ಎಂದು ಮೋದಿ ತಿಳಿಸಿದ್ದಾರೆ.

'ಇಂದು ಗುರು ನಾನಕ್ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಸಿಖ್ ಸಮುದಾಯದವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಶಾಂತಿಯುತ ಸಮಾಜವನ್ನು ನಿರ್ಮಿಸಲು ಗುರುನಾನಕ್ ಅವರ ವಿಚಾರಗಳು ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಎಲ್ಲರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು. ಗುರುನಾನಕ್ ಜಿ ಅವರ ಕರುಣೆ, ಪ್ರೀತಿ, ಸಾಮರಸ್ಯದ ಬೋಧನೆಗಳು ನಮ್ಮೆಲ್ಲರಿಗೂ ಯಾವಾಗಲೂ ಮಾರ್ಗದರ್ಶನ ನೀಡುತ್ತಿವೆ. ಅವರ ಆದರ್ಶಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿದ್ದು, ಸಾಮರಸ್ಯ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ನಮಗೆ ಸ್ಫೂರ್ತಿ ನೀಡುತ್ತವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಪ್ರೀತಿ, ಕರುಣೆ, ಸತ್ಯ, ಸಹನೆ ಮುಂತಾದ ಮಾನವೀಯ ಮೌಲ್ಯಗಳಿಗೆ ಧಾರ್ಮಿಕ ನಂಬಿಕೆಗಳ ರೂಪಕೊಟ್ಟು, ಮನುಕುಲವನ್ನು ಸನ್ಮಾರ್ಗದತ್ತ ಮುನ್ನಡೆಸಿದ ಗುರು, ದಾರ್ಶನಿಕ, ಮಾನವತಾವಾದಿ ಗುರುನಾನಕ್ ದೇವ್ ಅವರ ಜಯಂತಿಯಂದು ಅವರ ಜೀವನ, ಆದರ್ಶವನ್ನು ನೆನೆದು, ನಮಿಸುತ್ತೇನೆ. ಸಮಸ್ತ ಸಿಖ್ ಧರ್ಮಾನುಯಾಯಿಗಳಿಗೆ ಗುರುನಾನಕ್ ಜಯಂತಿಯ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೇಂದ್ರ ಸಚಿವರು ಸೇರಿದಂತೆ ದೆಹಲಿ ಸಿಎಂ ರೇಖಾ ಗುಪ್ತಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಗುರುನಾನಕ್ ಜಯಂತಿ ಪ್ರಯುಕ್ತ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.