ADVERTISEMENT

6 ಕೀರ್ತಿ ಚಕ್ರ, 33 ಶೌರ್ಯ ಚಕ್ರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮರ್ಮು

​ಪ್ರಜಾವಾಣಿ ವಾರ್ತೆ
Published 23 ಮೇ 2025, 4:15 IST
Last Updated 23 ಮೇ 2025, 4:15 IST
   

ನವದೆಹಲಿ: ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಆರು ಕೀರ್ತಿ ಚಕ್ರಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪ್ರದಾನ ಮಾಡಿದರು.

ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯಾಗಿದೆ.

ಸರ್ಕಾರ ಹಂಚಿಕೊಂಡಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಪ್ರಕಾರ, ಸಿಖ್ ಲೈಟ್ ಇನ್‌ಫೆಂಟ್ರಿಯ ಕರ್ನಲ್ ಮನ್ಪ್ರೀತ್ ಸಿಂಗ್, ರಾಷ್ಟ್ರೀಯ ರೈಫಲ್ಸ್‌ನ ಇತರ ಇಬ್ಬರು ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ಪ್ರದಾನ ನೀಡಲಾಗಿದೆ.

ADVERTISEMENT

ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಪುರಸ್ಕಾರ ಸಮಾರಂಭದಲ್ಲಿ ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸರ ಸಿಬ್ಬಂದಿಗೆ ಏಳು ಸೇರಿದಂತೆ 33 ಶೌರ್ಯ ಚಕ್ರ ಪ್ರದಾನ ಮಾಡಿದರು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮರಾಠಾ ಲೈಟ್ ಇನ್‌ಫೆಂಟ್ರಿಯ ಮೇಜರ್ ಮಲ್ಲ ರಾಮ ಗೋಪಾಲ್ ನಾಯ್ಡು, 56 ರಾಷ್ಟ್ರೀಯ ರೈಫಲ್ಸ್ ಮತ್ತು ಪಂಜಾಬ್ ರೆಜಿಮೆಂಟ್‌ನ ಮೇಜರ್ ಮಂಜಿತ್, 22 ರಾಷ್ಟ್ರೀಯ ರೈಫಲ್ಸ್‌ಗೆ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು.

ರೈಫಲ್‌ಮ್ಯಾನ್ ರವಿ ಕುಮಾರ್, ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿ, 63 ರಾಷ್ಟ್ರೀಯ ರೈಫಲ್ಸ್; ಸಿಖ್ ಲೈಟ್ ಇನ್‌ಫೆಂಟ್ರಿಯ ಕರ್ನಲ್ ಮನ್ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್‌ನ ನಾಯ್ಕ್ ದಿಲ್ವಾರ್ ಖಾನ್, ಆರ್ಟಿಲರಿ ರೆಜಿಮೆಂಟ್, ಜಮ್ಮು ಮತ್ತು ಕಾಶ್ಮೀರದ 28 ರಾಷ್ಟ್ರೀಯ ರೈಫಲ್ಸ್‌ನ ಡೆಪ್ಯೂಟಿ ಎಸ್‌ಪಿ ಹಿಮಾಯುನ್ ಮುಜಾಮಿಲ್ ಭಟ್ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ರಾಷ್ಟ್ರಪತಿ ಭವನವು ನಂತರ ಸಮಾರಂಭದ ಚಿತ್ರಗಳನ್ನು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

ಸ್ಕ್ವಾಡ್ರನ್ ಲೀಡರ್ ದೀಪಕ್ ಕುಮಾರ್, ಭಾರತೀಯ ವಾಯುಪಡೆಯ ಕಾರ್ಪೋರಲ್ ದಾಭಿ ಸಂಜಯ್ ಹಿಫಾಭಾಯ್ ಅವರಿಗೆ ಶೌರ್ಯ ಚಕ್ರವನ್ನು ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.