ADVERTISEMENT

ಬ್ರಿಟನ್‌ ರಾಣಿ ಅಂತ್ಯಸಂಸ್ಕಾರದಲ್ಲಿ ‍ಪಾಲ್ಗೊಳ್ಳಲು ಲಂಡನ್‌ಗೆ ತೆರಳಿದ ಮುರ್ಮು

ಸೆ.19ಕ್ಕೆ ರಾಣಿ 2ನೇ ಎಲಿಜಬೆತ್‌ ಅಂತ್ಯಸಂಸ್ಕಾರ

ಪಿಟಿಐ
Published 17 ಸೆಪ್ಟೆಂಬರ್ 2022, 14:05 IST
Last Updated 17 ಸೆಪ್ಟೆಂಬರ್ 2022, 14:05 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್ನಿಗೆ ತೆರಳಲು ವಿಮಾನ ಏರಿದ ಸಂದರ್ಭ –ಪಿಟಿಐ ಚಿತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್ನಿಗೆ ತೆರಳಲು ವಿಮಾನ ಏರಿದ ಸಂದರ್ಭ –ಪಿಟಿಐ ಚಿತ್ರ   

ನವದೆಹಲಿ:ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರದಲ್ಲಿ ‍ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಲಂಡನ್ನಿಗೆ ತೆರಳಿದರು.

‘ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಲಂಡನ್‌ಗೆ ಪ್ರಯಾಣ ಬೆಳೆಸಿದರು’ ಎಂದು ರಾಷ್ಟ್ರಪತಿ ಭವನ ಟ್ವೀಟ್‌ ಮಾಡಿದೆ.

ಬ್ರಿಟನ್‌ನ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಎಲಿಜಬೆತ್‌ ಸೆ.8ರಂದು ಮೃತಪಟ್ಟಿದ್ದು, ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಅಬೆನಲ್ಲಿ ಸೆ.19ರಂದು ಅಂತ್ಯಸಂಸ್ಕಾರ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.