ADVERTISEMENT

ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ

ಪಿಟಿಐ
Published 5 ಸೆಪ್ಟೆಂಬರ್ 2020, 10:39 IST
Last Updated 5 ಸೆಪ್ಟೆಂಬರ್ 2020, 10:39 IST
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್   

ನವದೆಹಲಿ: ಗಣಿತ ಕಲಿಕೆಯನ್ನು ಸುಲಭವಾಗಿಸುವುದು ಮತ್ತು ಕಲಿಕೆಯನ್ನು ಸಂಭ್ರಮವಾಗಿಸಲು ಅನುಸರಿಸಿದ ಹೊಸ ವಿಧಾನಗಳಿಗಾಗಿ ಸುಮಾರು 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.

ಬೋಧನೆಯಲ್ಲಿ ಹೊಸ ವಿಧಾನ ಸೇರಿದಂತೆ ಅದ್ವಿತೀಯ ಸಾಧನೆ, ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

'ಅತ್ಯುತ್ತಮ ಕಟ್ಟಡ, ದುಬಾರಿಪರಿಕರಗಳು ಹಾಗೂ ಸೌಲಭ್ಯಗಳಷ್ಟೇ ಉತ್ತಮ ಶಾಲೆಯನ್ನು ನಿರ್ಮಿಸಲಾರವು. ಉತ್ತಮ ಶಾಲೆ ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಅವರಷ್ಟೇ ಮಕ್ಕಳ ವ್ಯಕ್ತಿತ್ವ ನಿರ್ಮಿಸಲು ಉತ್ತಮ ಅಡಿಪಾಯ ಹಾಕಬಲ್ಲರು' ಎಂದು ರಾಷ್ಟ್ರಪತಿ ಅವರು ಶಿಕ್ಷಕರ ಹೊಣೆಗಾರಿಕೆಯನ್ನು ವಿವರಿಸಿದರು.

ADVERTISEMENT

ಕೋವಿಡ್-19 ಕಾರಣದಿಂದ ಉದ್ಭವಿಸಿದ್ದ ಪರಿಸ್ಥಿತಿ ನಿಭಾಯಿಸುವಲ್ಲಿ ಶಿಕ್ಷಕರು ತೋರಿದ ಪಾತ್ರವನ್ನು ಶ್ಲಾಘಿಸಿದ ಅವರು, ಡಿಜಿಟಲ್ ಶಿಕ್ಷಣ ಸೌಲಭ್ಯಗಳು ಗ್ರಾಮೀಣ ಮತ್ತು ದೂರದ ಕುಗ್ರಾಮಗಳಿಗೂ ತಲುಪಿಸಬೇಕಾಗಿದೆ ಎಂದು ಹೇಳಿದರು.

ಈ ವರ್ಷ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಶಸ್ತಿ ಪುರಸ್ಕೃತರ ಆಯ್ಕೆ ನಡೆಯಿತು. ಶಿಕ್ಷಕರು ತೀರ್ಪುಗಾರರ ಎದುರು ವಿಡಿಯೊ ಕಾನ್ಫರೆನ್ಸ್ ಮೂಲಕವೇ ತಮ್ಮ ವಿಷಯಗಳನ್ನು ಮಂಡಿಸಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.