ADVERTISEMENT

ಪೊಲೀಸರಿಂದ ಹಲ್ಲೆ: ಪ್ರಿಯಾಂಕಾ ಆರೋಪ

ಪಿಟಿಐ
Published 28 ಡಿಸೆಂಬರ್ 2019, 16:03 IST
Last Updated 28 ಡಿಸೆಂಬರ್ 2019, 16:03 IST
   

ಲಖನೌ: ಸಿಎಎ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಬಂಧಿತರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಸ್‌.ಆರ್.ದರಪುರಿ ಅವರ ನಿವಾಸಕ್ಕೆ ಭೇಟಿ ನೀಡದಂತೆ ತಡೆದ ಪೊಲೀಸರು, ನನ್ನ ಮೇಲೆ ಹಲ್ಲೆ ನಡೆಸಿದರು ಎಂದುಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಬಿಗಿ ಭದ್ರತೆ ಮಧ್ಯೆಯೂ ಪೊಲೀಸರ ಕಣ್ತಪ್ಪಿಸಿ ಅಧಿಕಾರಿ ನಿವಾಸಕ್ಕೆ ಭೇಟಿ ನೀಡುವಲ್ಲಿ ಯಶಸ್ವಿಯಾದರು.ಈ ಘಟನೆಯು ಶನಿವಾರ ಸಂಜೆ ಕೆಲಹೊತ್ತು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.

‘ಪೊಲೀಸರು ನನ್ನನ್ನು ಸುತ್ತುವರಿದಿದ್ದರು. ಒಬ್ಬ ಮಹಿಳಾ ಪೇದೆ ನನ್ನ ಕತ್ತು ಹಿಡಿದುಕೊಂಡರೆ, ಮತ್ತೊಬ್ಬರು ತಳ್ಳಿದರು. ಅಧಿಕಾರಿ ಮನೆಗೆ ತೆರಳುತ್ತಿದ್ದ ನಮಗೆ ಅಡ್ಡಲಾಗಿ ಪೊಲೀಸ್‌ ವಾಹನವನ್ನು ನಿಲ್ಲಿಸಿ ಅಡ್ಡಗಟ್ಟಲಾಯಿತು. ನೀವು ಹೋಗುವಂತಿಲ್ಲ ಎಂದು ತಡೆದರು’ ಎಂದು ಪ್ರಿಯಾಂಕಾ ಗಾಂಧಿ ದೂರಿದರು.

ADVERTISEMENT

ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್‌ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಒತ್ತಾಯಿಸಿದೆ.

]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.