ADVERTISEMENT

ಲೋಧಿ ಎಸ್ಟೇಟ್‌ ಬಂಗಲೆ ತೊರೆದ ಪ್ರಿಯಾಂಕಾ

ಪಿಟಿಐ
Published 30 ಜುಲೈ 2020, 13:01 IST
Last Updated 30 ಜುಲೈ 2020, 13:01 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ:ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಲೋಧಿ ಎಸ್ಟೇಟ್‌ ಬಂಗಲೆಯನ್ನು ಗುರುವಾರ ತೆರವುಗೊಳಿಸಿದ್ದಾರೆ.

ಪ್ರಿಯಾಂಕಾ ಅವರ ಹೊಸ ಮನೆಯ ನವೀಕರಣ ಕಾರ್ಯ ನಡೆಯುತ್ತಿದ್ದು,ಮಧ್ಯ ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಅವರು ಗುರುಗ್ರಾಮದಲ್ಲಿರುವ ಪೆಂಟ್‌ಹೌಸ್‌ನಲ್ಲಿ ಕೆಲವು ದಿನಗಳ ಕಾಲ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಪಿಜಿ ಭದ್ರತೆಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ದೆಹಲಿಯ ಲುಟಿಯೆನ್ಸ್ ಪ್ರದೇಶದಲ್ಲಿರುವ ಬಂಗಲೆಯನ್ನು ತೆರವು ಮಾಡುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಜುಲೈ 1ರಂದು ಸರ್ಕಾರ ಸೂಚಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.