ADVERTISEMENT

ಪುದುಚೇರಿ: ಕಿರಣ್‌ ಬೇಡಿ ವಿರುದ್ಧ ಮುಂದುವರಿದ ಧರಣಿ

ಪಿಟಿಐ
Published 11 ಜನವರಿ 2021, 10:45 IST
Last Updated 11 ಜನವರಿ 2021, 10:45 IST
ಕಿರಣ್‌ ಬೇಡಿ
ಕಿರಣ್‌ ಬೇಡಿ   

ಪುದುಚೇರಿ: ಇಲಾಖೆಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ಲೆಫ್ಟಿನೆಂಟ್‌ ಗರ್ವನರ್‌ ಕಿರಣ್‌ ಬೇಡಿ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುದುಚೇರಿ ಕಲ್ಯಾಣ ಸಚಿವ ಎಂ.ಕಂದಸಾಮಿ ನಡೆಸುತ್ತಿರುವ ಧರಣಿಯು ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಎಂ. ಕಂದಸಾಮಿ ಅವರು ಭಾನುವಾರ ವಿಧಾನಸಭೆಯ ಮುಂದೆ ಏಕಾಏಕಿ ಧರಣಿ ಕುಳಿತರು. ರಾತ್ರಿಪೂರ ಕಾರಿಡರ್‌ನಲ್ಲಿಯೇ ಮಲಗಿದ್ದರು ಎಂದು ಮೂಲಗಳು ಹೇಳಿವೆ.

‘ಯೋಜನೆಯ ಬಗ್ಗೆ ಚರ್ಚಿಸುವಂತೆ ಮತ್ತು ಯೋಜನೆಗೆ ಅನುಮೋದನೆಯನ್ನು ನೀಡುವಂತೆ ಕೋರಿ 15 ಪ್ರಸ್ತಾವಗಳನ್ನು ಲೆಫ್ಟಿನೆಂಟ್‌ ಗರ್ವನರ್‌ಗೆ ಕಳುಹಿಸಿದ್ಧೇನೆ. ಅದಕ್ಕೆ ಅವರು ಅಧಿಕಾರಿಗಳಿಂದ ಪೂರ್ತಿ ಯೋಜನೆಯನ್ನು ಪರಿಶೀಲಿಸಿ, ಸಭೆಯ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದರು’ ಎಂದು ಕಂದಸಾಮಿ ಅವರು ತಿಳಿಸಿದರು.

ADVERTISEMENT

ಕಂದಸಾಮಿ ಅವರು ಮುಚ್ಚಿದ ಜವಳಿ ಗಿರಣಿಗಳಾದ ಎಎಫ್‌ಟಿ, ಸ್ವದೇಶಿ ಮತ್ತು ಶ್ರೀ ಭಾರತಿ ಮಿಲ್ಸನ್ನು ಮತ್ತೆ ತೆರೆಯುವ ಪ್ರಸ್ತಾವ ಮುಂದಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.