ADVERTISEMENT

ಹೃದಯದಲ್ಲಿ ಬೆಂಕಿ ಜ್ವಾಲೆ ಪ್ರಧಾನಿ ಮೋದಿ ಆಕ್ರೋಶ

ಪಿಟಿಐ
Published 17 ಫೆಬ್ರುವರಿ 2019, 19:23 IST
Last Updated 17 ಫೆಬ್ರುವರಿ 2019, 19:23 IST
ಬಿಹಾರದ ಬೇಗುಸರಾಯ್‌ನಲ್ಲಿ ಭಾನುವಾರ ಅಭಿವೃಧ್ಧಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾತುಕತೆಯಲ್ಲಿ ತೊಡಗಿದ ಕ್ಷಣ  ಪಿಟಿಐ ಚಿತ್ರ
ಬಿಹಾರದ ಬೇಗುಸರಾಯ್‌ನಲ್ಲಿ ಭಾನುವಾರ ಅಭಿವೃಧ್ಧಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾತುಕತೆಯಲ್ಲಿ ತೊಡಗಿದ ಕ್ಷಣ  ಪಿಟಿಐ ಚಿತ್ರ   

ಪಟ್ನಾ: ‘ನಿಮ್ಮಂತೆಯೇ ನನ್ನ ಹೃದಯದಲ್ಲೂ ಬೆಂಕಿಯ ಜ್ವಾಲೆಗಳು ಧಗಧಗಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪುಲ್ವಾಮಾದಲ್ಲಿನ ಉಗ್ರರ ದಾಳಿಯ ಬಗ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದರು.

ಬಿಹಾರದ ಬೇಗುಸರಾಯ್‌–ಬರೌನಿಯಲ್ಲಿ ಭಾನುವಾರ ₹33 ಸಾವಿರ ಕೋಟಿ ವೆಚ್ಚದ ಪಟ್ನಾ ಮೆಟ್ರೊ ರೈಲು ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಎಲ್ಲ ಭಾರತೀಯರಂತೆ ನನ್ನಲ್ಲೂ ದುಃಖ, ನೋವು, ಆಕ್ರೋಶ ಮಡುಗಟ್ಟಿದೆ. ಎದೆಯಲ್ಲಿ ಬೆಂಕಿಯ ಜ್ವಾಲೆಗಳು ಹೊತ್ತಿ ಉರಿಯುತ್ತಿವೆ’ ಎಂದರು.

ಬಿಹಾರದ ಹುತಾತ್ಮ ಯೋಧರಾದ ಸಂಜಯ್‌ ಕುಮಾರ್‌ ಸಿನ್ಹಾ ಮತ್ತು ರತನ್‌ ಕುಮಾರ್‌ ಠಾಕೂರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಪೂರ್ಣ ಬಹುಮತ ಪಡೆದ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಇದೇ ವೇಳೆ ಕರೆ ನೀಡಿದರು.

ಪುಲ್ವಾಮಾ ದಾಳಿಗೆ ಭಾರತ ಶೀಘ್ರ ಪ್ರತೀಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಪಾಲ ಲಾಲ್‌ಜಿ ಟಂಡನ್‌, ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್, ರಾಂ ವಿಲಾಸ್‌ ಪಾಸ್ವಾನ್‌, ರಾಮ್‌ ಕೃಪಾಲ್‌ ಯಾದವ್‌ ಮತ್ತು ಗಿರಿರಾಜ ಸಿಂಗ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.