ADVERTISEMENT

VIDEO: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮೊದಲ ‘ಮಿಲ್ಕ್ ಎಟಿಎಂ’ ಆರಂಭ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 9:27 IST
Last Updated 10 ಮಾರ್ಚ್ 2021, 9:27 IST

ಪುಲ್ವಾಮಾ (ಜಮ್ಮು & ಕಾಶ್ಮೀರ): ಕೇಂದ್ರಾಡಳಿತ ಪ್ರದೇಶದ ಪ್ರಮುಖ ಹಾಲು ಉತ್ಪಾದಕ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೊದಲ ‘ಮಿಲ್ಕ್ ಎಟಿಎಂ’ಆರಂಭವಾಗಿದೆ. ಇಂಟಿಗ್ರೇಟೆಡ್ ಡೈರಿ ಡೆವಲಪ್‌ಮೆಂಟ್ ಸ್ಕೀಮ್ (ಐಡಿಡಿಎಸ್) ಅಡಿಯಲ್ಲಿ ಸ್ಥಳೀಯ ಯುವಕರ ಬೆಂಬಲದೊಂದಿಗೆ ಪಶು ಸಂಗೋಪನೆ ಇಲಾಖೆಯಿಂದ ಪುಲ್ವಾಮಾ ಪಟ್ಟಣದ ಪಹೂ ಪ್ರದೇಶದಲ್ಲಿ ಹಾಲು ಮಾರಾಟ ಯಂತ್ರವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಹಾಲು ಎಟಿಎಂಗಳ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಡೈರಿ ಸಂಸ್ಕರಣಾ ಸಾಧನಗಳಿಗೆ ಸರ್ಕಾರ ಶೇ. 50 ರಷ್ಟು ಸಹಾಯಧನವನ್ನು ನೀಡುತ್ತಿದೆ. ಸರ್ಕಾರದ ಸಹಾಯದಿಂದ ಹಾಲು ಎಟಿಎಂ ಸ್ಥಾಪಿಸಿರುವ ಉದ್ಯಮಿ ಶಬೀರ್ ಅಹ್ಮದ್ ವಾಗೆ, ವಿತರಣಾ ಯಂತ್ರವು ಮೂರು ದಿನಗಳವರೆಗೆ ಹಾಲನ್ನು ತಾಜಾವಾಗಿರಿಸಿಕೊಳ್ಳುತ್ತದೆ ಮತ್ತು ಸ್ಥಳೀಯರಿಗೆ ಹಾಲಿನ ಲಭ್ಯತೆಯನ್ನು ಸುಲಭಗೊಳಿಸುತ್ತದೆ ಎಂದು ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.