ADVERTISEMENT

ಐಪಿಎಸ್‌ ಅಧಿಕಾರಿಯನ್ನು ವಿವಾಹವಾದ ಪಂಜಾಬ್‌ ಶಿಕ್ಷಣ ಸಚಿವ ಹರ್ಜೋತ್‌ ಸಿಂಗ್‌

ಪಿಟಿಐ
Published 25 ಮಾರ್ಚ್ 2023, 12:34 IST
Last Updated 25 ಮಾರ್ಚ್ 2023, 12:34 IST
.
.   

ಚಂಡೀಗಢ: ಎಎಪಿ ಶಾಸಕ ಹರ್ಜೋತ್‌ ಸಿಂಗ್‌ ಬೈನ್ಸ್‌ ಅವರು ಐಪಿಎಸ್‌ ಅಧಿಕಾರಿ ಜ್ಯೋತಿ ಯಾದವ್‌ ಅವರೊಂದಿಗೆ ಶನಿವಾರ ರೂಪನಗರ ಜಿಲ್ಲೆಯ ಗುರುದ್ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವಿವಾಹವು ಸಿಖ್‌ ಸಮುದಾಯದ ಶಾಸ್ತ್ರದಂತೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಜೋಡಿ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ADVERTISEMENT

ಹರ್ಜೋತ್‌ ಅವರು ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್‌ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಇದೀಗ ಭಗವಂತ ಮಾನ್‌ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.