
ಬಂಧನ
(ಪ್ರಾತಿನಿಧಿಕ ಚಿತ್ರ)
ಚಂಡೀಗಢ : ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯೊಂದರ ಆದೇಶ ಪಾಲಿಸುತ್ತಿದ್ದ ಅಮೆರಿಕ, ಬ್ರಿಟನ್ ಹಾಗೂ ಜರ್ಮನಿಯಲ್ಲಿದ್ದ ವ್ಯಕ್ತಿಗಳ ಜಾಲದ ಭಾಗವಾಗಿದ್ದ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಟಿಡ್ಡಿ ಎಂಬುವನನ್ನು ಪಂಜಾಬ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈತನಿಂದ ಎರಡು ಕಚ್ಚಾ ಬಾಂಬ್‌ಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಚ್ಚಾ ಬಾಂಬ್ ತಯಾರಿಸಲು ಈತ ಉತ್ಕೃಷ್ಟ ಗುಣಮಟ್ಟದ ಆರ್‌ಡಿಎಕ್ಸ್ ಬಳಸಿದ್ದ. ಮನ್‌ಪ್ರೀತ್ ಸಿಂಗ್ ಅಮೃತಸರದ ನಿವಾಸಿ. ಈ ಬಗ್ಗೆ ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದರು.
‘ಪಾಕಿಸ್ತಾನದ ಉಗ್ರ ಸಂಘಟನೆಯ ವ್ಯಕ್ತಿಯು ಡ್ರೋನ್ ಮೂಲಕ ವಸ್ತುವೊಂದನ್ನು ಪಂಜಾಬ್‌ನ ಅಜನಾಲ್‌ಗೆ ಕಳುಹಿಸಿದ್ದನು. ಇದನ್ನು ಮನ್‌ಪ್ರೀತ್ ಪಡೆದುಕೊಂಡಿದ್ದ. ಬಳಿಕ ತನ್ನ ಗ್ರಾಮದ ಕಾಲುವೆವೊಂದರ ಹತ್ತಿರ ಬಚ್ಚಿಟ್ಟಿದ್ದ’ ಎಂದು ವಿವರಿಸಿದರು.
‘ಕಚ್ಚಾ ಬಾಂಬ್‌ಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವುದಕ್ಕೆ ಮುಂದಿನ ಆದೇಶ ಬರುವವರೆಗೂ ಕಾಯುವಂತೆ ಪಾಕ್‌ನ ವ್ಯಕ್ತಿಯು ಈತನಿಗೆ ಹೇಳಿದ್ದಾನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.