ADVERTISEMENT

ಪಂಜಾಬ್‌ ಪೊಲೀಸರ ಕಾರ್ಯಾಚರಣೆ: ‘ಬಿಕೆಐ’ನ ಮೂವರ ಬಂಧನ

ಪಿಟಿಐ
Published 27 ಜೂನ್ 2025, 13:56 IST
Last Updated 27 ಜೂನ್ 2025, 13:56 IST
.
.   

ಚಂಡೀಗಡ: ಪಾಕಿಸ್ತಾನದ ಐಎಸ್‌ಐ ಜತೆಗೆ ಸಂಪರ್ಕ ಹೊಂದಿರುವ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಸಂಘಟನೆಯ ಮೂವರನ್ನು ಪಂಜಾಬ್‌ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.  

‘ಅಮೃತಸರ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ ಘಟಕವನ್ನು ಬ್ರಿಟನ್‌ನ ನಿಶಾನ್‌ ಸಿಂಗ್‌, ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್‌ ರಿಂದಾ ಮುನ್ನಡೆಸುತ್ತಿದ್ದರು. ಅಮೃತಸರದ ರಾಮ್‌ದಾಸ್‌ ಪ್ರದೇಶದ ಸೆಹಜ್‌ಪಾಲ್‌ ಸಿಂಗ್‌, ವಿಕ್ರಂಜಿತ್ ಸಿಂಗ್‌ ಬಂಧಿತ ಆರೋಪಿಗಳು. ಬಂಧಿತರಲ್ಲಿ ಒಬ್ಬ ಬಾಲಕನೂ ಸೇರಿದ್ದಾನೆ. ಇವರಿಂದ ಎರಡು ಗ್ರೆನೇಡ್‌, ಪಿಸ್ತೂಲ್‌, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.  

‘ಬಂಧಿತರು ಅಮೃತಸರ ಪ್ರದೇಶದಲ್ಲಿ ಪೊಲೀಸ್‌ ಠಾಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ಹಿಂಸಾಚಾರ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಇವರ ಬಂಧನದಿಂದ ಅಪಾರ ಸಂಖ್ಯೆಯ ಅಮಾಯಕರ ಜೀವ ಉಳಿದಿದೆ’ ಎಂದು ಪಂಜಾಬ್‌ ಪೊಲೀಸ್ ಮಹಾನಿರ್ದೇಶಕ  ಗೌರವ್‌ ಯಾದವ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. 

ADVERTISEMENT

‘ಉಗ್ರರ ವಿರುದ್ಧದ  ಕಾರ್ಯಾಚರಣೆ ಮುಂದುವರಿಯಲಿದೆ. ಪಂಜಾಬ್‌ ಪೊಲೀಸರು ಕೈಗೊಂಡಿರುವ ‘ಸುರಕ್ಷಿತ ಪಂಜಾಬ್‌ ಅಭಿಯಾನ’ವನ್ನು ಬೆಂಬಲಿಸಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.