ADVERTISEMENT

ವಿಜಿಲೆನ್ಸ್ ಅಧಿಕಾರಿಗೆ ₹50 ಲಕ್ಷ ಆಮಿಷ; ಪಂಜಾಬ್‌ನ ಮಾಜಿ ಸಚಿವ ಬಂಧನ

ಪಿಟಿಐ
Published 16 ಅಕ್ಟೋಬರ್ 2022, 4:51 IST
Last Updated 16 ಅಕ್ಟೋಬರ್ 2022, 4:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಢ: ತನ್ನ ವಿರುದ್ಧದ ಪ್ರಕರಣವನ್ನು ಇತ್ಯರ್ಥಗೊಳಿಸಲು ಅಧಿಕಾರಿಯೊಬ್ಬರಿಗೆ ₹50 ಲಕ್ಷ ಆಮಿಷ ಒಡ್ಡಿರುವ ಆರೋಪದ ಮೇಲೆ ಪಂಜಾಬ್‌ನ ಮಾಜಿ ಸಚಿವ ಸುಂದರ್ ಶ್ಯಾಮ್ ಅರೋರಾ ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೊ ಭಾನುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅರೋರಾ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ವಿಜಿಲೆನ್ಸ್ ಬ್ಯೂರೊದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್, ವಿಜಿಲೆನ್ಸ್ ಅಧಿಕಾರಿಗೆ ₹50 ಲಕ್ಷ ಆಮಿಷ ಒಡ್ಡಿರುವ ಅರೋರಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಮನಮೋಹನ್ ಶರ್ಮಾ ಅವರಿಗೆ ₹1 ಕೋಟಿ ಆಮಿಷ ಒಡ್ಡಿದರು. ಮೊದಲ ಕಂತಿನ ಭಾಗವಾಗಿ ₹50 ಲಕ್ಷ ನಗದು ಹೊಂದಿರುವ ಬ್ಯಾಗ್ ಅಧಿಕಾರಿಗೆ ಹಸ್ತಾಂತರಿಸುವ ವೇಳೆಯಲ್ಲಿ ಮಾಜಿ ಸಚಿವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.