ADVERTISEMENT

ಒಬಿಸಿಯ 18 ಸಮುದಾಯಗಳು ಪರಿಶಿಷ್ಟ ಜಾತಿ ಪಟ್ಟಿಗೆ: ಉತ್ತರ ಪ್ರದೇಶ ಸುತ್ತೋಲೆ ರದ್ದು

ಪಿಟಿಐ
Published 1 ಸೆಪ್ಟೆಂಬರ್ 2022, 15:41 IST
Last Updated 1 ಸೆಪ್ಟೆಂಬರ್ 2022, 15:41 IST
   

ಲಖನೌ: ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ 18 ಸಮುದಾಯಗಳನ್ನು ಪರಿಶಿಷ್ಟಜಾತಿ ಪಟ್ಟಿಗೆ ಸೇರಿಸಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಅಲಹಾಬಾದ್ ಹೈಕೋರ್ಟ್‌ ರದ್ದುಗೊಳಿಸಿದೆ.

2016ರಲ್ಲಿ ಸಮಾಜವಾದಿ ಸರ್ಕಾರ ಮತ್ತು 2019ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಇದಕ್ಕೆ ಸಂಬಂಧಿಸಿದ ಸುತ್ತೋಲೆಗಳನ್ನು ಹೊರಡಿಸಿದ್ದವು. ಆದರೆ ಅದನ್ನು ಜಾರಿಮಾಡಲು ಕೋರ್ಟ್‌ ನಿರ್ಬಂಧಗಳನ್ನು ಹೇರಿತ್ತು.

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೂ 2024ರ ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಈ ಸುತ್ತೋಲೆಯಿಂದ ಮತ್ತಷ್ಟು ಇಂಬು ಬರಲಿತ್ತು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.