ADVERTISEMENT

ಏಪ್ರಿಲ್–ಜೂನ್: ವಿದೇಶಿ ಪ್ರವಾಸಿಗರು ಹೆಚ್ಚು ಭೇಟಿ ನೀಡಿದ್ದು ಕುತುಬ್‌ ಮಿನಾರ್‌ಗೆ

ಪಿಟಿಐ
Published 29 ಸೆಪ್ಟೆಂಬರ್ 2022, 16:25 IST
Last Updated 29 ಸೆಪ್ಟೆಂಬರ್ 2022, 16:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಏಪ್ರಿಲ್‌ನಿಂದ ಜೂನ್‌ ತಿಂಗಳಿನಲ್ಲಿ ವಿದೇಶಿ ಪ್ರವಾಸಿಗರು ಕುತುಬ್‌ ಮಿನಾರ್‌ಗೆ ಹೆಚ್ಚು ಭೇಟಿ ನೀಡಿದ್ದಾರೆ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಭಾರತೀಯ ಪುರಾತತ್ವ ಇಲಾಖೆ ಉತ್ತರಿಸಿದೆ.

‘ವಿದೇಶಿ ಪ್ರವಾಸಿಗರು ಹೆಚ್ಚು ಭೇಟಿ ನೀಡಿದ ಎರಡನೇ ಸ್ಥಳ ಐತಿಹಾಸಿಕ ಕೆಂಪುಕೋಟೆ. ಇದೇ ಅವಧಿಯಲ್ಲಿ ಹುಮಾಯೂನ್‌ ಸಮಾಧಿಗೂ ಹೆಚ್ಚು ಜನರು ಭೇಟಿ ನೀಡುತ್ತಾರೆ’ ಎಂದೂ ಪುರಾತತ್ವ ಇಲಾಖೆ ತಿಳಿಸಿದೆ.

ಭಾರತೀಯ ಪುರಾತತ್ವ ಇಲಾಖೆಯ ಮಾಹಿತಿ ವಿಶ್ಲೇಷಣೆಯ ಪ್ರಕಾರ,ಏಪ್ರಿಲ್ ಮತ್ತು ಜೂನ್ ನಡುವೆ 15,51,975 ಭಾರತೀಯರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.21,580 ವಿದೇಶಿ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ADVERTISEMENT

‘ವಿಶ್ವ ಪಾರಂಪರಿಕಾ ತಾಣವಾದ ಕುತುಬ್ ಮಿನಾರ್‌ಗೆ ಏಪ್ರಿಲ್ ಮತ್ತು ಜೂನ್ ನಡುವೆ 3,81,249 ದೇಶೀಯ ಪ್ರವಾಸಿಗರು ಹಾಗೂ 9,063 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದೂ ಇಲಾಖೆ ಹೇಳಿದೆ.

ಏಪ್ರಿಲ್‌ನಲ್ಲಿ ಗರಿಷ್ಠ ಸಂಖ್ಯೆಯ ವಿದೇಶಿ ಪ್ರವಾಸಿಗರು ಈ ಸ್ಮಾರಕಕ್ಕೆ ಭೇಟಿ ನೀಡಿದ್ದರು.

ಕೆಂಪು ಕೋಟೆಗೆ ಮೂರು ತಿಂಗಳ ಅವಧಿಯಲ್ಲಿ 5,696 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಸ್ಥಳಕ್ಕೆ ಅತಿ ಹೆಚ್ಚು ದೇಶೀಯ ಪ್ರವಾಸಿಗರು, ಅಂದರೆ 8,13,434 ಮಂದಿ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.