ADVERTISEMENT

ರಾಹುಲ್‌ ಕ್ಷಮೆಯಾಚನೆಗೆ ಪಟ್ಟು: ಮತ್ತೆ ಕಲಾಪ ಮುಂದೂಡಿಕೆ

ಪಿಟಿಐ
Published 14 ಮಾರ್ಚ್ 2023, 7:28 IST
Last Updated 14 ಮಾರ್ಚ್ 2023, 7:28 IST
ಸಂಸತ್‌
ಸಂಸತ್‌   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾಡಿರುವ ಟೀಕೆಯು ಸಂಸತ್ತಿನಲ್ಲಿ ಮಂಗಳವಾರವೂ ತೀವ್ರ ಕೋಲಾಹಲ ಎಬ್ಬಿಸಿದ್ದು, ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಸದಸ್ಯರ ನಡುವೆ ಇದೇ ವಿಷಯವಾಗಿ ಗದ್ದಲವಾಗಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿಗೆ ಅವಕಾಶ ಕಲ್ಪಿಸುತ್ತದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಈ ನಡುವೆ ಬಿಜೆಪಿ ಸದಸ್ಯರು ರಾಹುಲ್‌ ಗಾಂಧಿ ಕ್ಷಮೆಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದವು. ಇದರಿಂದ ಉಭಯ ಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದರಿಂದ ಸದನವನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಯಿತು.

ADVERTISEMENT

ಬಜೆಟ್‌ ಅಧಿವೇಶನದ ಎರಡನೇ ಹಂತದ ಚರ್ಚೆ ಸೋಮವಾರ ಆರಂಭವಾಯಿತು. ರಾಹುಲ್‌ ಅವರ ಇತ್ತೀಚಿನ ಲಂಡನ್‌ ಭಾಷಣವು ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದರಿಂದ ಬಿಜೆಪಿ ಸದಸ್ಯರು ರಾಹುಲ್‌ ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಇದರಿಂದ ಕಾಂಗ್ರೆಸ್‌ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಸದನವನ್ನು ಮಂಗಳವಾರ ಮುಂದೂಡಲಾಗಿತ್ತು.

ಇಂದು ಸದನ ಆರಂಭವಾಗುತ್ತಿದ್ದಂತೆ ಇದೇ ವಿಷಯವಾಗಿ ಉಭಯ ಪಕ್ಷಗಳು ಗದ್ದಲ ಮಾಡಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ದೇಶದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಅವಹೇಳನ ಮಾಡಿರುವ ರಾಹುಲ್‌ ಗಾಂಧಿ ದೇಶದ ಕ್ಷಮೆಯಾಚಿಸಬೇಕೆಂದು ಸರ್ಕಾರದ ಪ್ರತಿನಿಧಿಗಳು ಪಟ್ಟುಹಿಡಿದರೆ, ವಿದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿರುವ ನಿರ್ದಿಷ್ಟ ಹೇಳಿಕೆಗಳನ್ನು ಪ್ರತಿಪಕ್ಷಗಳು ಗುರಾಣಿಯಾಗಿ ಉಲ್ಲೇಖಿಸಿ, ಸರ್ಕಾರದ ವಿರುದ್ಧ ನಿನ್ನೆ ಪ್ರತಿದಾಳಿ ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.