ADVERTISEMENT

ಸತತ 3ನೇ ದಿನ ಇ.ಡಿ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2022, 7:03 IST
Last Updated 15 ಜೂನ್ 2022, 7:03 IST
ಮಂಗಳವಾರ ಇ.ಡಿ ವಿಚಾರಣೆಗೆ ತೆರಳುವ ಮುನ್ನ ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಜೊತೆ ರಾಹುಲ್ ಗಾಂಧಿ: ಐಎಎನ್‌ಎಸ್ ಚಿತ್ರ
ಮಂಗಳವಾರ ಇ.ಡಿ ವಿಚಾರಣೆಗೆ ತೆರಳುವ ಮುನ್ನ ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಜೊತೆ ರಾಹುಲ್ ಗಾಂಧಿ: ಐಎಎನ್‌ಎಸ್ ಚಿತ್ರ   

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸತತ ಮೂರನೇ ದಿನ ದೆಹಲಿಯ ಜಾರಿ ನಿರ್ದೆಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.

ಈ ನಡುವೆ ದೆಹಲಿಯ ಎಐಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ನಾಯಕಿಯರು ಪ್ರತಿಭಟನೆ ಮುಂದುವರಿಸಿದ್ದಾರೆ.

ಇತ್ತ, ಕೇಂದ್ರ ಸರ್ಕಾರ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಸಂಸತ್ ಭವನದ ಎದುರಿನ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಸಂಸದರು ಧರಣಿ ನಡೆಸಿದ್ದಾರೆ.

ADVERTISEMENT

ಸೋಮವಾರ 10 ಗಂಟೆ ಸೇರಿ ಎರಡು ದಿನಗಳಲ್ಲಿ ರಾಹುಲ್‌ ಅವರನ್ನು ಒಟ್ಟು 18 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.

ಮಂಗಳವಾರ, ರಾಹುಲ್‌ ಅವರಿಗೆ, ಅವರು ನೀಡಿದ್ದ ಹೇಳಿಕೆಯ ಲಿಖಿತ ಪ್ರತಿಯನ್ನು ನೀಡಲಾಯಿತು. ಅವರು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಸಹಿ ಮಾಡಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಅಧಿಕಾರಿಗಳು ಹಲವು ಬಾರಿ, ಬಿಡುವು ಪಡೆದು ವಿಚಾರಣೆಗೆ ವಾಪಸಾಗುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.