ತಿರುವನಂತಪುರ: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥವಾಗಿ ಇದೇ ಮೊದಲ ಬಾರಿಗೆ 'ಉಮ್ಮನ್ ಚಾಂಡಿ ಸಾಮಾಜಿಕ ಸೇವಕ ಪ್ರಶಸ್ತಿ' ನೀಡಲಾಗಿದೆ.
ಮೊದಲ ‘ಉಮ್ಮನ್ ಚಾಂಡಿ ಸಾಮಾಜಿಕ ಸೇವಕ ಪ್ರಶಸ್ತಿ‘ಗೆ ರಾಹುಲ್ ಭಾಜನರಾಗಿದ್ದಾರೆ ಎಂದು ಉಮ್ಮನ್ ಚಾಂಡಿ ಫೌಂಡೇಶನ್ ಇಂದು (ಭಾನುವಾರ) ಘೋಷಿಸಿದೆ.
ಪ್ರಶಸ್ತಿಯ ಜತೆ ಒಂದು ಲಕ್ಷ ನಗದು ಬಹುಮಾನ ಹಾಗೂ ಖ್ಯಾತ ಕಲಾವಿದ ನೇಮೊಮ್ ಪುಷ್ಪರಾಜ್ ವಿನ್ಯಾಸಗೊಳಿಸಿದ ಕಲಾಕೃತಿಯನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಭಾರತ ಜೋಡೊ ಯಾತ್ರೆ ಕೈಗೊಳ್ಳುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ, ಅವರ ಕಷ್ಟಗಳಿಗೆ ಧ್ವನಿಯಾದ ರಾಹುಲ್ ಗಾಂಧಿಯವರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಪರಿಣಿತ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.