ADVERTISEMENT

ಭಾರತೀಯನಾಗಿ ಈ ತೀರ್ಪನ್ನು ಗೌರವಿಸುತ್ತೇನೆ: ರಾಹುಲ್‌ ಗಾಂಧಿ 

ಏಜೆನ್ಸೀಸ್
Published 23 ಮೇ 2019, 12:49 IST
Last Updated 23 ಮೇ 2019, 12:49 IST
   

ನವದೆಹಲಿ: 'ಚುನಾವಣೆ ಪ್ರಚಾರದ ವೇಳೆ ನಾನು ಸ್ಪಷ್ಟವಾಗಿ ಹೇಳಿದ್ದೆ... ಜನರೇ ಮಾಲೀಕರು ಎಂದು. ಅವರ ಈ ಆದೇಶವನ್ನು ನಾನು ಭಾರತೀಯನಾಗಿ ಗೌರವಿಸುತ್ತೇನೆ,' ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಚುನಾವಣೆ ಸೋಲಿನ ಬಳಿಕ ನವದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸಂಜೆಸುದ್ದಿಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, ‘ಈ ದೇಶದಲ್ಲಿ ಜನರೇ ಮಾಲೀಕರು. ಜನ ತೀರ್ಪನ್ನು ಅತ್ಯಂತ ಸ್ಪಷ್ಟವಾಗಿ ನೀಡಿದ್ದಾರೆ. ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ನಾನು ಅಭಿನಂದಿಸುತ್ತೇನೆ,’ ಎಂದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಜನತೆ ತೀರ್ಮಾನಿಸಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ,’ ಎಂದರು.

ADVERTISEMENT

ಅಮೇಠಿಯಲ್ಲಿನ ಹಿನ್ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ ಜನರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಸ್ಮೃತಿ ಇರಾನಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,’ ಎಂದರು.

ಇನ್ನು ಸೋಲಿನ ಕುರಿತು ಮಾತನಾಡಿರುವ ಪ್ರಿಯಾಂಕಾ ಗಾಂಧಿ, ‘ ಜನರ ನಿರ್ಧಾರ ಗೌರವಿಸುತ್ತೇವೆ. ನರೇಂದ್ರ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು,’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.