ADVERTISEMENT

ರಾಹುಲ್‌ ಗಾಂಧಿ ಶುದ್ಧ ಹೃದಯದ ವ್ಯಕ್ತಿ: ಸಂಜಯ್‌ ರಾವತ್‌ ಬಣ್ಣನೆ

ಪಿಟಿಐ
Published 5 ಮೇ 2025, 15:35 IST
Last Updated 5 ಮೇ 2025, 15:35 IST
ಸಂಜಯ್‌ ರಾವುತ್‌–ಪಿಟಿಐ ಚಿತ್ರ
ಸಂಜಯ್‌ ರಾವುತ್‌–ಪಿಟಿಐ ಚಿತ್ರ   

ಮುಂಬೈ: ‘ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ರಾಹುಲ್‌ ಗಾಂಧಿ ಅವರು ಶುದ್ಧ ಹೃದಯದ ವ್ಯಕ್ತಿ’ ಎಂದು  ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಕ್ಷವು ಇತಿಹಾಸದಲ್ಲಿ ಮಾಡಿದ ಎಲ್ಲಾ ತಪ್ಪುಗಳ ಜವಾಬ್ದಾರಿಯನ್ನು ಹೊರುವುದಾಗಿ ರಾಹುಲ್‌ ಗಾಂಧಿ ಅವರು ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಕೂಡ ರಾಹುಲ್‌ ಅವರಿಂದ ಈ ವಿಷಯ ಕಲಿಯಬೇಕಿದ್ದು, ತಪ್ಪುಗಳನ್ನು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

ರಾವುತ್‌ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ ಮುಖ್ಯಸ್ಥ ಏಕನಾಥ ಶಿಂದೆ, ‘ಸಂಜಯ್‌ ರಾವುತ್‌ ಅವರು ತಪ್ಪು ಮಾಡಿದ್ದಾರೆ. ಈಗಲೂ ತಪ್ಪನ್ನೇ ಮಾತನಾಡಿದ್ದಾರೆ. 1980ರಲ್ಲಿ ನಡೆದ ತಪ್ಪಿಗೆ ರಾಹುಲ್‌ ಗಾಂಧಿ ಅವರು ಈಗ ಕ್ಷಮೆ ಕೇಳುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.