ADVERTISEMENT

ಸುಳ್ಳು ಹೇಳುವ ಮೋದಿ; ಖಾಲಿ ಭರವಸೆ ನೀಡುವ ಮಮತಾ –ರಾಹುಲ್ ಗಾಂಧಿ ಆರೋಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 3:05 IST
Last Updated 24 ಮಾರ್ಚ್ 2019, 3:05 IST
   

ಪೂರ್ನಿಯಾ(ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧವೂ ಗುಡುಗಿದ್ದಾರೆ.

ಲೋಕಸಭೆ ಚುನಾವಣೆ ನಿಮಿತ್ತ ರಾಜ್ಯದಲ್ಲಿ ನಡೆದ ಮೊದಲ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌, ಮೋದಿ ನಿಮಗೆ ಉದ್ಯೋಗವನ್ನು ನೀಡಿದರೇ? ಮಮತಾ ನಿಮಗೆ ಕೆಲಸ ಕೊಟ್ಟರಾ? ಮೋದಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮಮತಾ ಖಾಲಿ ಭರವಸೆಗಳನ್ನು ಮುಂದುವರಿಸಿದ್ದಾರೆ’ ಎಂದು ಕಿಡಿಕಾರಿದರು.

ಪ್ರಧಾನಿ ಚೌಕೀದಾರ್‌(ಕಾವಲುಗಾರ) ಎಂದು ಕರೆದುಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಅಧ್ಯಕ್ಷ ಮೋದಿ ಕೇವಲ ಶ್ರೀಮಂತರ ಚೌಕೀದಾರ್ ಎಂದು ವ್ಯಂಗ್ಯವಾಡಿದರು.

ADVERTISEMENT

ಕಾಂಗ್ರೆಸ್‌ ಭದ್ರ ಕೋಟೆಮಾಲ್ಡಾ ಜಿಲ್ಲೆಯ ಚಂಚಲ್‌ ಪಟ್ಟಣದಲ್ಲಿ ಮೋದಿ ಹಾಗೂ ಮಮತಾ ಅವರನ್ನು ಗುರಿಯಾಗಿರಿಸಿ ಸುಮಾರು 20 ನಿಮಿಷ ಟೀಕೆ ಮಾಡಿದರು.

ಪಶ್ವಿಮ ಬಂಗಾಳ ಆಹಾರ ಮತ್ತು ನಾಗರಿಕ ‍ಸರಬರಾಜು ಸಚಿವ ಜ್ಯೋತಿ ಪ್ರಿಯ ಮಲ್ಲಿಕ್‌ರಾಹುಲ್‌ಗೆ ತಿರುಗೇಟು ನೀಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿರುವ 72 ಲಕ್ಷ ರೈತರಲ್ಲಿ 65 ಲಕ್ಷ ಜನರು, ಸರ್ಕಾರ ನೀಡುವ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ರಾಹುಲ್‌ ಗಾಂಧಿಗೆ ತಿಳಿದಿಲ್ಲ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.