ADVERTISEMENT

ಭಾರತ್ ಜೋಡೊ ಯಾತ್ರೆ: ಸರ್ದಾರ್ ಪಟೇಲ್ ಪ್ರತಿಮೆಗೆ ರಾಹುಲ್ ನಮನ

ಪಿಟಿಐ
Published 10 ಮಾರ್ಚ್ 2024, 11:09 IST
Last Updated 10 ಮಾರ್ಚ್ 2024, 11:09 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

–ಪಿಟಿಐ ಚಿತ್ರ 

ತಾಪಿ: ಭಾರತ್ ಜೋಡೊ ಯಾತ್ರೆಯ ಭಾಗವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾನುವಾರ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿರುವ ಸ್ವರಾಜ್ ಆಶ್ರಮಕ್ಕೆ ಭೇಟಿ ನೀಡಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು. 

ADVERTISEMENT

1922ರಲ್ಲಿ ಸರ್ದಾರ್ ಪಟೇಲ್ ಅವರಿಂದ ಸ್ಥಾಪನೆಯಾಗಿರುವ ಸ್ವರಾಜ್ ನಿವಾಸದಲ್ಲಿ ರಾಹುಲ್ ಗಾಂಧಿ ಅವರು ಕೆಲಹೊತ್ತು ಕಳೆದರು. ಇದು ಭಾರತ್ ಜೋಡೊ ನ್ಯಾಯ ಯಾತ್ರೆಗೆ ಸಿಕ್ಕ ಸ್ಫೂರ್ತಿಯಾಗಿದೆ. ನಾಲ್ಕು ದಿನಗಳ ಯಾತ್ರೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ 400 ಕಿ.ಮೀ ಸಂಚರಿಸಿರುವ ರಾಹುಲ್ ಗಾಂಧಿ ಅವರು ಭಾನುವಾರ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. 

ರಾಜ್ಯದ ನಾನಾ ಭಾಗಗಳಲ್ಲಿ ಸಾಗಿದ ಈ ಯಾತ್ರೆಯು ಭಾನುವಾರ ಅಂತ್ಯವಾಗಲಿದ್ದು, ಒಂದು ದಿನದ ಬಿಡುವಿನ ಬಳಿಕ ಅಂದರೆ, ಮಂಗಳವಾರದಿಂದ ಮಹಾರಾಷ್ಟ್ರದ ನಂದೂರಬರ್ ಜಿಲ್ಲೆಯಿಂದ ಮತ್ತೆ ಆರಂಭವಾಗಲಿದೆ ಎಂದು ಪಕ್ಷದ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.