ADVERTISEMENT

ಸಂಸತ್‌ ಭವನ: ರಾಹುಲ್‌ ಬರುತ್ತಿದ್ದಂತೆ ಕಾಲ್ಕಿತ್ತ ಸಚಿವರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 16:34 IST
Last Updated 11 ಫೆಬ್ರುವರಿ 2026, 16:34 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಸಂಸತ್‌ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ಸಚಿವರ ಬಳಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬರುತ್ತಿದ್ದಂತೆ ಸಚಿವರು ಅಲ್ಲಿಂದ ಕಾಲ್ಕಿತ್ತ ಪ್ರಸಂಗ ಬುಧವಾರ ನಡೆಯಿತು.

ವರದಿಗಾರರ ಜತೆ ಮಾತನಾಡುತ್ತಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ ಮತ್ತು ಅಶ್ವಿನಿ ವೈಷ್ಣವ್‌ ಅವರು, ‘ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರು ಮಾಡಿದ ಆರೋಪಗಳ ಆಧಾರರಹಿತವಾಗಿವೆ’ ಎಂದು ಹೇಳಿದರು.

ಇದೇ ವೇಳೆ ಅಲ್ಲಿಗೆ ಬಂದ ರಾಹುಲ್‌ ಗಾಂಧಿ ಅವರು, ‘ಬನ್ನಿ ಆ ಕುರಿತು ಒಟ್ಟಿಗೆ ನಿಂತು ಮಾತನಾಡೋಣ’ ಎಂದು ಆಹ್ವಾನಿಸಿದರು. ಅದನ್ನು ನಿರಾಕರಿಸಿದ ಸಚಿವರು ಅಲ್ಲಿಂದ ಸಾಗಲು ಮುಂದಾದರು.

ADVERTISEMENT

ಆಗ ರಾಹುಲ್‌ ಅವರು ಸಚಿವ ಜೋಶಿ ಅವರ ತೋಳು ಹಿಡಿದು ಮೆತ್ತಗೆ ಎಳೆಯಲು ಪ್ರಯತ್ನಿಸಿದರು. ಆಗ ಕೈಬಿಡಿಸಿಕೊಂಡ ಜೋಶಿ ಅವರು ಸಚಿವ ವೈಷ್ಣವ್‌ ಅವರೊಂದಿಗೆ ಅಲ್ಲಿಂದ ತೆರಳಿದರು. ಇದನ್ನು ಗಮನಿಸಿದ ರಾಹುಲ್‌ ಸಹಾಯಕರು ಮತ್ತು ಅವರ ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಗುತ್ತಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.