
ಪಿಟಿಐ
ಉದಕಮಂಡಲ (ತಮಿಳುನಾಡು): ಗುಡಲೂರಿನ ಸೇಂಟ್ ಥಾಮಸ್ ಇಂಗ್ಲಿಷ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಸುಗ್ಗಿ ಹಬ್ಬ ‘ಪೊಂಗಲ್’ ಆಚರಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಭಾಗವಹಿಸಿ ಸಂಭ್ರಮಿಸಿದರು.
ಶಾಲೆಗೆ ಬಂದ ರಾಹುಲ್ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಅವರು ಸಾಂಪ್ರದಾಯಿಕ ನೃತ್ಯವನ್ನೂ ಮಾಡಿದರು. ‘ಪೊಂಗಲ್’ ಆಚರಣೆಯಲ್ಲಿ ಪಾಲ್ಗೊಂಡು ಜನರ ಜತೆಗೂಡಿ ‘ಪೊಂಗಲ್’ ಸಿಹಿ ಖಾದ್ಯವನ್ನು ತಯಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.