ADVERTISEMENT

ಐರೋಪ್ಯ ಒಕ್ಕೂಟದ ಸಂಸದರನ್ನು ಭೇಟಿ ಮಾಡಲಿರುವ ರಾಹುಲ್‌

ಪಿಟಿಐ
Published 6 ಸೆಪ್ಟೆಂಬರ್ 2023, 13:58 IST
Last Updated 6 ಸೆಪ್ಟೆಂಬರ್ 2023, 13:58 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಮಂಗಳವಾರದಿಂದ ಯುರೋಪ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಐರೋಪ್ಯ ಒಕ್ಕೂಟದ ಸಂಸದರು, ವಿದ್ಯಾರ್ಥಿಗಳು ಹಾಗೂ ಅನಿವಾಸಿ ಭಾರತೀಯರನ್ನು ಭೇಟಿಯಾಗಲಿದ್ದಾರೆ.

ಬ್ರುಸೆಲ್ಸ್‌ನಲ್ಲಿ ಸೆ.7ರಂದು ಸಂಸದರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಅನಿವಾಸಿ ಭಾರತೀಯರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. 

ಮರು ದಿನ ಬೆಳಿಗ್ಗೆ ಭಾರತೀಯ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 1.30ಕ್ಕೆ ಪತ್ರಿಕಾಗೋಷ್ಠಿ ನಡೆಸುವರು. ನಂತರ ಫ್ರಾನ್ಸ್‌ಗೆ ತೆರಳಲಿರುವ ಅವರು, ಪ್ಯಾರಿಸ್‌ನಲ್ಲೂ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಫ್ರಾನ್ಸ್‌ನ ಸಂಸದರೊಂದಿಗೆ 9ರಂದು ಸಭೆ ನಡೆಸುವ ರಾಹುಲ್‌, ಸೈನ್ಸಸ್‌ ಪೊ ಯುನಿವರ್ಸಿಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 10ರಂದು ನೆದರ್‌ಲೆಂಡ್‌ಗೆ ತೆರಳಲಿದ್ದು, ನಾಲ್ಕು ಶತಮಾನದ ಐತಿಹ್ಯ ಹೊಂದಿರುವ ಲೈಡೆನ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.

ಸೆ.11ರಂದು ನಾರ್ವೆಗೆ ಭೇಟಿ ನೀಡಿ, ಓಸ್ಲೋದಲ್ಲಿ ಸಂಸದರೊಂದಿಗೆ ಚರ್ಚಿಸಲಿದ್ದಾರೆ. ನಂತರ ಅನಿವಾಸಿ ಭಾರತೀಯರನ್ನು ಭೇಟಿಯಾಗಲಿದ್ದಾರೆ. ಇಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗುತ್ತಾರೆ.

ರಾಹುಲ್‌ ಗಾಂಧಿ ಅವರಿಗಾಗಿಯೇ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸೆ.12ರ ರಾತ್ರಿ ದೇಶಕ್ಕೆ ಮರಳಲಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.