ADVERTISEMENT

ಅಸ್ಸಾಂ: ಗಾಯಕ ಜುಬೀನ್‌ ಗರ್ಗ್‌ ಕುಟುಂಬ ಭೇಟಿ ಮಾಡಲಿರುವ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 16:08 IST
Last Updated 16 ಅಕ್ಟೋಬರ್ 2025, 16:08 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಗುವಾಹಟಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಗಾಯಕ ಜುಬೀನ್‌ ಗರ್ಗ್‌ ಅವರ ಕುಟುಂಬಸ್ಥರನ್ನು ಗುವಾಹಟಿಯಲ್ಲಿ ಶುಕ್ರವಾರ ಭೇಟಿಯಾಗಲಿದ್ದಾರೆ.

ಸೋನಾಪುರದಲ್ಲಿರುವ ಜುಬೀನ್‌ ಅವರ ಸಮಾಧಿಗೆ ರಾಹುಲ್‌ ಗಾಂಧಿ ಪುಷ್ಪನಮನ ಸಲ್ಲಿಸಲಿದ್ದಾರೆ. ಜುಬೀನ್‌ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಪ್ರತಿಭಟನೆಗಳು ಮತ್ತು ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲೇ ರಾಹುಲ್‌ ಭೇಟಿ ನೀಡುತ್ತಿದ್ದಾರೆ.

ADVERTISEMENT

ಜುಬೀನ್‌ ಅವರ ದಿಢೀರ್‌ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

28 ದಿನದ ನಂತರ ಬರುತ್ತಿದ್ದಾರೆ: ಬಿಸ್ವಾ ಶರ್ಮಾ

ರಾಹುಲ್‌ ಗಾಂಧಿ ಅವರ ಭೇಟಿ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ‘ಘಟನೆ ನಡೆದ 28 ದಿನಗಳ ನಂತರ ಅವರು ಬರುತ್ತಿದ್ದಾರೆ. ಆದರೂ ಸ್ವಾಗತಿಸುವೆ. ಜುಬೀನ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್‌ ಅಥವಾ ಪ್ರಿಯಾಂಕ ಅವರಂತಹ ಕಾಂಗ್ರೆಸ್‌ನ ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ಬರಲಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.