ADVERTISEMENT

ವಯನಾಡು ಕಡೆಗಣನೆ: ಸಂಸತ್ತಿನಲ್ಲಿ ರಾಹುಲ್, ಪ್ರಿಯಾಂಕಾ ನೇತೃತ್ವದಲ್ಲಿ ಪ್ರತಿಭಟನೆ

ಪಿಟಿಐ
Published 26 ನವೆಂಬರ್ 2024, 14:24 IST
Last Updated 26 ನವೆಂಬರ್ 2024, 14:24 IST
<div class="paragraphs"><p>ವಯನಾಡು ಭೂಕುಸಿತದ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ</p></div>

ವಯನಾಡು ಭೂಕುಸಿತದ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ

   

(ಪ್ರಜಾವಾಣಿ ವಾರ್ತೆ)

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ, ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ಪರಿಹಾರ ಕಾರ್ಯಗಳಿಗೆ ಕೇಂದ್ರದ ಕಡೆಗಣನೆಯನ್ನು ವಿರೋಧಿಸಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಸಂಸತ್ತಿನ ಒಳಗೂ, ಹೊರಗೂ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ADVERTISEMENT

ಭೂಕುಸಿತ ಪ್ರದೇಶದ ಜನರಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡದಿರುವುದು 'ಅಮಾನವೀಯ' ಎಂದು ಕಲ್ಪೆಟ್ಟದ ಕಾಂಗ್ರೆಸ್‌ ಶಾಸಕ ಟಿ.ಸಿದ್ದೀಕ್ ಆರೋಪಿಸಿದ್ದಾರೆ.

'ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಸಿಎಂ ಪಿಣರಾಯಿ ವಿಜಯನ್ ಅವರಲ್ಲದೆ ತಾವು ಕೂಡ ಭೂಕುಸಿತದಿಂದ ಬದುಕುಳಿದವರ ಪರಿಹಾರ ಹಾಗೂ ಪುನರ್ವಸತಿಗಾಗಿ ನೆರವು ಕೋರಿ ಮನವಿ ಸಲ್ಲಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದರೂ ಪ್ರಧಾನಿ ಮೋದಿ ಅಥವಾ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಲ್ಲ' ಎಂದು ಅವರು ಆರೋಪಿಸಿದರು.

'ದುರಂತಕ್ಕೀಡಾದ ಜನರ ಮೇಲೆ ಕೇಂದ್ರವು ಅಮಾನವೀಯ ವರ್ತನೆಯನ್ನು ತೋರಿದೆ. ಇದರ ವಿರುದ್ಧ ರಾಹುಲ್, ಪ್ರಿಯಾಂಕಾ ನೇತೃತ್ವದಲ್ಲಿ ಸಂಸತ್ತಿನ ಒಳಗೂ, ಹೊರಗೂ ಪ್ರತಿಭಟಿಸಲಾಗುವುದು' ಎಂದು ಅವರು ಹೇಳಿದರು.

ವಯನಾಡಿನಲ್ಲಿ ಜುಲೈ 30ರಂದು ನಡೆದ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದರು. 47 ಮಂದಿ ನಾಪತ್ತೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.