ADVERTISEMENT

ರಾಜಕೀಯ ಲಾಭದಿಂದ ಕೂಡಿದ ವ್ಯಾಪಾರಕ್ಕೆ ಒತ್ತು: ಮೋದಿ ವಿರುದ್ಧ ರಾಹುಲ್‌ ಕಿಡಿ

ಪಿಟಿಐ
Published 18 ಡಿಸೆಂಬರ್ 2024, 6:11 IST
Last Updated 18 ಡಿಸೆಂಬರ್ 2024, 6:11 IST
ರಾಹುಲ್‌ ಗಾಂಧಿ ಹಾಗೂ ನರೇಂದ್ರ ಮೋದಿ
ರಾಹುಲ್‌ ಗಾಂಧಿ ಹಾಗೂ ನರೇಂದ್ರ ಮೋದಿ   

ನವದೆಹಲಿ: ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಉತ್ಪಾದನಾ ವಲಯದಲ್ಲಿ ಕುಸಿತ, ಹಣ ದುಬ್ಬರ ಸೇರಿದಂತೆ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಮೋದಿ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ವ್ಯಾಪಾರದಲ್ಲಿ ಕೊರತೆ ಹಾಗೂ ಆಮದುಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ ಎಂದೂ ಕಿಡಿಕಾರಿದ್ದಾರೆ.

'ಸರ್ಕಾರಗಳು ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ. ದುರ್ಬಲಗೊಂಡ ಉತ್ಪಾದನಾ ವಲಯ, ಹಣ ದುಬ್ಬರ, ವ್ಯಾಪಾರದ ಕೊರತೆ, ಬಡ್ಡಿದರಗಳ ಸೇರಿದಂತೆ ಆಮದುಗಳಲ್ಲಿ ಏರಿಕೆ ಕಂಡಿದೆ' ಎಂದು ರಾಹುಲ್‌ ಟೀಕಾ ಪ್ರಹಾರ ನಡೆಸಿದ್ದಾರೆ.

ADVERTISEMENT

'ಭಾರತದ ರಫ್ತುಗಳು ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಆದರೆ ಆಮದುಗಳಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತರಕಾರಿ ತೈಲ, ರಸಗೊಬ್ಬರ ಮತ್ತು ಬೆಳ್ಳಿಗಳ ಆಮದುಗಳು ವರ್ಷದಿಂದ ವರ್ಷಕ್ಕೆ ಶೇ. 27ರಷ್ಟು ಏರಿಕೆಯಾಗಿ ದಾಖಲೆಯ ಮಟ್ಟ ತಲುಪಿದೆ' ಎಂದು ರಾಹುಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.