ADVERTISEMENT

ಕೊರೊನಾ ಮುಂದೆ ಸೋತ ಮೋದಿ: ರಾಹುಲ್‌ ಟೀಕೆ

ಪಿಟಿಐ
Published 27 ಜೂನ್ 2020, 7:01 IST
Last Updated 27 ಜೂನ್ 2020, 7:01 IST
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ    

ನವದೆಹಲಿ: ‘ಕೊರೊನಾ ಸೋಂಕಿತರ ಸಂಖ್ಯೆಯು ದೇಶದಲ್ಲಿ ಐದು ಲಕ್ಷ ದಾಟಿದ್ದು, ಈ ಪಿಡುಗನ್ನು ತಡೆಯಲು ಸರ್ಕಾರದ ಮುಂದೆ ಯಾವುದೇ ಯೋಜನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾದ ಮುಂದೆ ಶರಣಾಗಿದ್ದಷ್ಟೇ ಅಲ್ಲ, ಅದರ ವಿರುದ್ಧ ಹೋರಾಡಲು ಸಹ ನಿರಾಕರಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌, ‘ಪ್ರಧಾನಿ ಮೌನವಾಗಿದ್ದಾರೆ. ಅವರು ಶರಣಾಗಿದ್ದಾರೆ ಮತ್ತು ಪಿಡುಗಿನ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ’ ಎಂದಿದ್ದಾರೆ.

ಟ್ವೀಟ್‌ ಜತೆಗೆ ಒಂದು ವರದಿಯನ್ನು ಟ್ಯಾಗ್‌ ಮಾಡಿರುವ ಅವರು, ‘ಐಸಿಎಂಆರ್‌ನ ಮಂಡಳಿಯಾಲಿ, ಸಚಿವರಾಗಲಿ ಈವರೆಗೆ ಸಭೆ ನಡೆಸಲಿಲ್ಲ. ಆರೋಗ್ಯ ಸಚಿವರೂ ಪಿಡುಗಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ’ ಎಂದಿದ್ದಾರೆ.

ADVERTISEMENT

ಶುಕ್ರವಾರ ಬೆಳಿಗ್ಗೆ 8ರಿಂದ ಶನಿವಾರ ಬೆಳಿಗ್ಗೆ 8 ಗಂಟೆವರೆಗಿನ ಅವಧಿಯಲ್ಲಿ ದೇಶದಲ್ಲಿ 18,552 ಮಂದಿ ಹೊಸದಾಗಿ ಕೊರೊನಾ ಸೋಂಕಿತರಾಗಿದ್ದು, 384 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆಯು 5,08,953 ಆಗಿದೆ. ಈವರೆಗೆ 15,685 ಮಂದಿ ಕೋವಿಡ್‌–19ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.