ADVERTISEMENT

ಲೋಕಸಭೆ ಸಭಾಧ್ಯಕ್ಷರಿಗೆ ರಾಹುಲ್‌ ಗಾಂಧಿ ಪತ್ರ

ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ವಿಚಾರ

ಪಿಟಿಐ
Published 17 ಡಿಸೆಂಬರ್ 2020, 15:58 IST
Last Updated 17 ಡಿಸೆಂಬರ್ 2020, 15:58 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ರಕ್ಷಣಾ ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸಭೆಯಲ್ಲಿ ಸಮಿತಿ ಅಧ್ಯಕ್ಷರು ನನಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿಲ್ಲ’ ಎಂದು ಅಸಮಧಾನ ಉಲ್ಲೇಖಿಸಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.

ಸಂಸದೀಯ ಸಮಿತಿ ಸಭೆಗಳಲ್ಲಿ ಮುಕ್ತವಾಗಿ ಮಾತನಾಡುವ ಸಂಸದರ ಹಕ್ಕು ರಕ್ಷಿಸುವಂತೆಯೂ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ‘ನಿಗದಿತ ವಿಷಯದ ಚರ್ಚೆಯಿಂದ ವಿಷಯಾಂತರವಾದಾಗ ಅದನ್ನು ಸಭೆಗೆ ತಿಳಿಸುವುದು ಸದಸ್ಯರೊಬ್ಬರ ಹಕ್ಕು. ಸಮಿತಿಯ ಅಧ್ಯಕ್ಷರು ಸದಸ್ಯರೊಬ್ಬರಿಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ ಎಂಬುವುದು, ಸೇನಾ ವ್ಯವಹಾರಗಳನ್ನು ಸರ್ಕಾರವು ಹೇಗೆ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಸಾಕ್ಷ್ಯ’ ಎಂದು ಪತ್ರದಲ್ಲಿ ರಾಹುಲ್‌ ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಸಂಬಂಧಿತ ವಿಷಯದ ಚರ್ಚೆಗೆ ಬದಲು ಸಶಸ್ತ್ರಪಡೆಗಳ ಸಮವಸ್ತ್ರದ ಬಗ್ಗೆ ಚರ್ಚಿಸಿ ಸಮಯ ಕಳೆಯಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಸಂಸದೀಯ ಸಮಿತಿ ಸಭೆಯಿಂದ ರಾಹುಲ್‌ ಗಾಂಧಿ ಹಾಗೂ ಸಮಿತಿಯಲ್ಲಿದ್ ಕಾಂಗ್ರೆಸ್‌ನ ಇತರ ಹೊರನಡೆದಿದ್ದರು. ರಾಷ್ಟ್ರೀಯ ಭದ್ರತೆ ಹಾಗೂ ಚೀನಾ ವಿರುದ್ಧ ಹೋರಾಡಲು ಸೇನಾಪಡೆಯನ್ನು ಮತ್ತಷ್ಟು ಸದೃಢಗೊಳಿಸುವ ಬಗ್ಗೆ ಚರ್ಚಿಸಬೇಕು ಎಂದು ರಾಹುಲ್‌ ಹೇಳಿದ್ದರು. ಆದರೆ, ಇದಕ್ಕೆ ಅವಕಾಶ ನೀಡಿರಲಿಲ್ಲ ಎಂದು ರಾಹುಲ್‌ ಆರೋಪಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.