ADVERTISEMENT

ದೆಹಲಿಯಲ್ಲಿ ಮರಗೆಲಸದ ಕಾರ್ಮಿಕರೊಂದಿಗೆ ಕಾಣಿಸಿಕೊಂಡ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2023, 13:42 IST
Last Updated 28 ಸೆಪ್ಟೆಂಬರ್ 2023, 13:42 IST
<div class="paragraphs"><p>ಚಿತ್ರಕೃಪೆ@@RahulGandhi</p></div>

ಚಿತ್ರಕೃಪೆ@@RahulGandhi

   

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಮರಗೆಲಸ ( ಕಾರ್ಪೆಂಟರ್ ) ಮಾಡುವ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಮರಗೆಲಸ ಕಾರ್ಮಿಕರನ್ನು ಭೇಟಿ ಮಾಡಿದ ಫೋಟೊಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ.

ADVERTISEMENT

‘ಏಷ್ಯಾದ ಅತಿ ದೊಡ್ಡ ಫರ್ನೀಚರ್‌ ಮಾರುಕಟ್ಟೆ ದೆಹಲಿಯ ಕೀರ್ತಿನಗರದಲ್ಲಿ ಮರಗೆಲಸದ ಕಾರ್ಮಿಕರನ್ನು ಭೇಟಿ ಮಾಡಿದೆ. ಅವರು ಬಹಳ ಕಷ್ಟಪಟ್ಟು ದುಡಿಯುವವರು. ಹಾಗೂ ಅದ್ಭುತ ಕೌಶಲ್ಯವನ್ನು ಹೊಂದಿರುವವರು. ನಾನು ಅವರಿಂದ ಸ್ವಲ್ಪ ಮಟ್ಟಿಗೆ ಕೆಲಸ ಮಾಡವುದನ್ನು ಕಲಿತುಕೊಂಡೆ‘ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಆನಂದ ವಿಹಾರ್ ರೈಲ್ವೆ ನಿಲ್ದಾಣಕ್ಕೆ ಸೆಪ್ಟೆಂಬರ್‌ 21ರಂದು ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಅವರು, ಹಮಾಲಿಗಳ ಜತೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ್ದರು.

‘ಹಮಾಲಿಗಳಿಗೆ ಸಂಬಳ, ಪಿಂಚಣಿ, ಆರೋಗ್ಯ ವಿಮೆ ಇಲ್ಲ. ಅಲ್ಲದೆ ರೈಲ್ವೆಯಿಂದ ಸರ್ಕಾರಿ ಸೌಲಭ್ಯಗಳೂ ಇಲ್ಲ. ಇವುಗಳ ನಡುವೆಯೂ ಅವರು ಕಾಲ ಬದಲಾಗಲಿದೆ ಎನ್ನುವ ಆಶಯ ಹೊಂದಿದ್ದಾರೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ರಾಹುಲ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.